ಬೇಕಾಗುವ ಸಾಮಗ್ರಿಗಳು
ಕ್ಯಾಪ್ಸಿಕಂ 1
ಈರುಳ್ಳಿ 1
ಟೊಮೆಟೊ 1
200 ಗ್ರಾಂ ಪನ್ನೀರ್
ಕೊತ್ತುಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 6
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ
ಪಲಾವ್ ಎಲೆ 1
ಲವಂಗ 4
ಚಕ್ಕೆ ಸ್ವಲ್ಪ
ದನಿಯಾ ಪುಡಿ 1 ಚಮಚ
ಗರಂ ಮಸಾಲಾ 1/2ಚಮಚ
ಜೀರಾ ಮಸಾಲಾ – 1/4 ಚಮಚ
ಕಾರ್ನ್ ಫ್ಲೋರ್ – 1 ಚಮಚ
ಕ್ಯಾಪ್ಸಿಕಂ, ಈರುಳ್ಳಿ, ಟೊಮೆಟೊ, ಪನ್ನೀರ್, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಈ ಎಲ್ಲವನ್ನು ಕಟ್ ಮಾಡಿ ಇಟ್ಟುಕೊಳ್ಳಿ
ಒಂದು ತವಾ ತೆಗೆದುಕೊಂಡು ಸ್ವಲ್ಪ ಅಡುಗೆ ಎಣ್ಣೆ ಮತ್ತು ಬಟರ್ ಹಾಕಿ ಬಿಸಿಯಾದ ಮೇಲೆ ಪಲಾವ್ ಎಲೆ, ಲವಂಗ, ಚಕ್ಕೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಟ್ ಮಾಡಿ ಇಟ್ಟುಕೊಂಡಿರುವ ಕ್ಯಾಪ್ಸಿಕಂ, ಈರುಳ್ಳಿ, ಟೊಮೆಟೊ ಹಾಕಿ ಬೆಂದ ಮೇಲೆ ದನಿಯಾ ಪುಡಿ ಒಂದು ಸ್ಪೂನ್ ಗರಂ ಮಸಾಲಾ ಜೀರಾ ಮಸಾಲಾ ಸ್ವಲ್ಪ ಹಾಕಿ ಚೆನ್ನಾಗಿ ಕಲಸಿ ಒಂದು ಸ್ಪೂನ್ ಕಾರ್ನ್ ಫ್ಲೋರ್ ತೆಗೆದುಕೊಂಡು ಸ್ವಲ್ಪ ನೀರಿನ ಜೊತೆ ಮಿಕ್ಸ್ ಮಾಡಿ ಹಾಕಿ. ಚೆನ್ನಾಗಿ ಬೆಂದ ಮೇಲೆ ಕಟ್ ಮಾಡಿರುವ ಪನ್ನೀರನ್ನು ಹಾಕಿ. ಅದರ ಜೊತೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈಗ ಬಿಸಿ ಬಿಸಿ ಪನೀರ್ ಚಿಲ್ಲಿ ಮಸಾಲ ರೆಡಿಯಾಗಿದೆ. ಪನೀರ್ ಚಿಲ್ಲಿ ಮಸಾಲ ಜೊತೆ ಬಿಸಿ ಬಿಸಿ ಚಪಾತಿ ಸವಿಯಲು ಸೂಪರ್ ಆಗಿರುತ್ತೆ.