Hubballi : ಹಜರತ್ ಸೈಯದ್ ಮೊಹಮ್ಮದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಅಂತ್ಯ…
ಹುಬ್ಬಳ್ಳಿ : ಹುಬ್ಬಳ್ಳಿ – ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಹಿನ್ನಲೆ , ಈಗಾಗಲೇ ಮೂರು ಗೋರಿಗಳ ತೆರವು ಪೂರ್ಣಗೊಂಡಿದೆ. ತೆರವು ಕಾರ್ಯಾಚರಣೆ 24 ಗಂಟೆಗಳ ಕಾಲ ನಡೆದಿದೆ.. ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಸಮಾಧಿಗಳನ್ನು ತೆರವುಗೊಳಿಸಲಾಗಿದೆ.
ಹಜರತ್ ಸೈಯದ್ ಮುಹಮ್ಮದ್ ಶಾ ಖಾದ್ರಿ ಅವರ ಸಮಾಧಿ ಮತ್ತು ಇಬ್ಬರು ಸೇವಕರ ಸಮಾಧಿಗಳನ್ನು ತೆರವುಗೊಳಿಸುವುದು. ಮೂರು ಸಮಾಧಿಗಳನ್ನು ಸಿಬ್ಬಂದಿ ಯಂತ್ರದ ಮೂಲಕ ತೆಗೆದಿದ್ದಾರೆ. ದರ್ಗಾ ಮಂಡಳಿ ಸೂಚಿಸಿದ ಸ್ಥಳಕ್ಕೆ ಗೋರಿಗಳನ್ನು ಸ್ಥಳಾಂತರಿಸಲು ನಿರ್ಧಾರ ಮಾಡಲಾಗಿದೆ. ಮತ್ತೊಂದೆಡೆ ಮಸೀದಿಯ ಅರ್ಧ ಭಾಗವನ್ನು ಸಿಬ್ಬಂದಿ ಧ್ವಂಸಗೊಳಿಸಿದ್ದಾರೆ.. ಬೈರಿದೇವರಕೊಪ್ಪದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ..
ಹಜರತ್ ಸೈಯದ್ ಮೊಹಮ್ಮದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಇನ್ನೂ ಬಾಕಿ ಇದೆ. ಹುಬ್ಬಳ್ಳಿ, ಧಾರವಾಡ, ಅವಳಿನಗರದಲ್ಲಿ ನಾಳೆಯವರೆಗೆ ನಿಷೇಧಾಜ್ಞೆ ಮುಂದುವರಿದಿದೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಸೆಕ್ಷನ್ 144 ಜಾರಿಯನ್ನು ಮುಂದುವರಿಸಲು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
Hubballi : Hazrat Syed Mohammad Shah Qadri Dargah Clearance Operation Ended…








