Hubli | ಆಕಾಶ ಬುಟ್ಟಿಯಿಂದಾಗಿ ಹೊತ್ತಿ ಉರಿದ ಮನೆ
ಹುಬ್ಬಳ್ಳಿ : ಮನೆಯ ಮೇಲೆ ಆಕಾಶ ಬುಟ್ಟಿ ಬಿದ್ದು ಮನೆ ಧಗಧಗನೇ ಎಂದು ಹೊತ್ತಿ ಉರಿದಿರುವ ಘಟನೆ ಹುಬ್ಬಳ್ಳಿಯ ಘಂಟಿಕೇರಿ ಓಣಿಯ ಬಳಿ ನಡೆದಿದೆ.
ಶಿವರಾಜ ತಾಳಿಕೋಟಿ ಎಂಬುವವರಿಗೆ ಸೇರಿದ ಮನೆಯ ಮೇಲೆ ಆಕಾಶ ಬುಟ್ಟಿಗಳು ಬಿದ್ದಿವೆ.
ಈ ವೇಳೆ ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಈ ಬೆಂಕಿಯನ್ನ ಕಂಡ ಅಕ್ಕಾಪಕ್ಕದ ಮನೆಯವರು, ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.