ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ, ವಸ್ತು ಸಾಗಾಟ ಮಾಡುವವರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಇಲ್ಲದ ವಾಹನಗಳಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ನಂತರ ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶಕ್ಕೆ ಪಡೆಯಲಾಗಿದೆ. ವಿವಿಧ ಚೆಕ್ ಪೋಸ್ಟ್ಗಳಲ್ಲಿ ಒಟ್ಟು 7 ಲಕ್ಷ ಹಣ ಪಡೆಯಲಾಗಿದೆ. ಜಮಖಂಡಿ ತಾಲೂಕಿನ ಹುನ್ನೂರ ಚೆಕ್ ಪೋಸ್ಟ್ನಲ್ಲಿ 6 ಲಕ್ಷ ರೂ. ಮತ್ತು ಹುಲ್ಯಾಳ ಚೆಕ್ ಪೋಸ್ಟನಲ್ಲಿ 1 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದ್ದಾರೆ.
ಅಲ್ಲದೇ, ನೀತಿ ಸಂಹಿತೆ ಉಲ್ಲಂಘನೆ 9 ಪ್ರಕರಣ ದಾಖಲಾಗಿದೆ. ವಿವಿದೆಡೆ ಅಬಕಾರಿ ಇಲಾಖೆಯಿಂದ ದಾಳಿ ನಡೆಸಿ 77.70 ಲೀಟರ್ ಮದ್ಯ ಮತ್ತು 15.60 ಲೀಟರ್ ಬಿಯರ ವಶಕ್ಕೆ ಪಡೆಯಲಾಗಿದೆ. ಒಟ್ಟು 5.50 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ಬಿಯರ್ ಸೀಜ್ ಆಗಿದೆ. ಆಟೋದಲ್ಲಿ ಸಾಗಿಸುತ್ತಿದ್ದ 2.89 ರೂ. ಮೌಲ್ಯದ 34.56 ಲೀಟರ್ ಮದ್ಯ, ಜಮಖಂಡಿ ಮತಕ್ಷೇತ್ರದ ಕುಂಚನೂರು ಗ್ರಾಮದ ಹತ್ತಿರ 8.64 ಲೀಟರ್ ಮದ್ಯ, ಬಾದಾಮಿ ಮತಕ್ಷೇತ್ರದ ಜಾಲಿಹಾಳ ಗ್ರಾಮದ ರಮಜಾನಸಾಬ್ ಹುಸೇನಸಾಬ ಮನೆ ಮೇಲೆ ದಾಳಿ ಮಾಡಿ 15.6 ಲೀಟರ್ ಬೀಯರ್ ಹಾಗೂ ಹುನಗುಂದ ಮತಕ್ಷೇತ್ರದ ಹೂವನೂರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಹತ್ತಿರ 71 ಸಾವಿರ ರೂ. ಮೌಲ್ಯದ 4.320 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.