ಭಾರತೀಯ ಅಂಚೆ ಇಲಾಖೆಯು ರಾಜ್ಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ನೇಮಕಾತಿ ಅಡಿಯಲ್ಲಿ ಗ್ರಾಮೀಣ್ ಡಾಕ್ ಸೇವಕ್ (ಬಿಪಿಎಂ/ಎಬಿಪಿಎಂ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು 1714 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 12 ಸಾವಿರ ರೂ.ನಿಂದ 29830ರ ವರೆಗೆ ಸಂಬಳ ಇರಲಿದೆ.
ಕರ್ನಾಟಕ ಪೋಸ್ಟಲ್ ಸರ್ಕಲ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿಯನ್ನು ಪಾಸ್ ಆಗಿರಬೇಕು. ಆಗಸ್ಟ್ 23ರೊಳಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.








