ರಿಲಯನ್ಸ್ ಜಿಯೋ ಗೆ ಭಾರಿ ಲಾಭ – ಗ್ರಾಹಕರನ್ನ ಕಳೆದುಕೊಂಡ Vi
ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಆಗಸ್ಟ್ ತಿಂಗಳ ಅವಧಿಯಲ್ಲಿ ಭಾರಿ ಲಾಭ ಗಳಿಸಿದೆ. ಕಂಪನಿಯು ತನ್ನ ಗ್ರಾಹಕರ ಬುಟ್ಟಿಗೆ 32.8 ಲಕ್ಷ ಹೆಚ್ಚಿನ ಬಳಕೆದಾರರನ್ನ ಸೇರಿಸಿಕೊಂಡಿದೆ. ಇದಕ್ಕೆ ವಿರುದ್ಧವಾಗಿ ವೊಡಾಫೋನ್ ಐಡಿಯಾ ದೊಡ್ಡ ನಷ್ಟವನ್ನ ಅನುಭವಿಸುತ್ತಿವೆ. ಒಂದು ತಿಂಗಳೊಳಗೆ Vi ನ 19.6 ಲಕ್ಷ ಬಳಕೆದಾರರು ಕಣ್ಮರೆಯಾಗಿದ್ದಾರೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹಂಚಿಕೊಂಡ ಮಾಹಿತಿಯ ಪ್ರಕಾರ, ಭಾರ್ತಿ ಏರ್ಟೆಲ್ 3.26 ಲಕ್ಷ ಚಂದಾದಾರರನ್ನ ಸೇರಿಸಿದೆ. ಜಿಯೋ ನಂತರ ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್ಟೆಲ್ ಭಾರತದಲ್ಲಿ ಎರಡನೇ ಅತಿದೊಡ್ಡ ನೆಟ್ವರ್ಕ್ ಪೂರೈಕೆದಾರರಾಗಿದ್ದಾರೆ.
ಈ ಮೂರು ಟಾಪ್ ಟೆಲಿಕಾಂ ಕಂಪನಿಗಳಲ್ಲಿ, ಜಿಯೋ ಮಾತ್ರ ತಿಂಗಳಿನಿಂದ ತಿಂಗಳಿಗೆ ಬೆಳೆಯುತ್ತಿದೆ.
ರಿಲಯನ್ಸ್ ಜಿಯೋ ಇತರ ಕಂಪನಿಗಳಿಗಿಂತ ಪ್ರತಿ ತಿಂಗಳು ಹೆಚ್ಚು ಚಂದಾದಾರರನ್ನು ಸೇರಿಸಿಕೊಂಡಿದೆ. ಜುಲೈನಲ್ಲಿ 29.5 ಲಕ್ಷ ಹೊಸ ಗ್ರಾಹಕರನ್ನ ಸೇರಿಸಿಕೊಂಡಿದೆ. ಭಾರ್ತಿ ಏರ್ಟೆಲ್ ಜುಲೈನಲ್ಲಿ 5.13 ಲಕ್ಷ ಬಳಕೆದಾರರನ್ನು ಸೇರಿಸಿದರೆ, ವಿಐ ತಿಂಗಳಲ್ಲಿ 15.4 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.
5G ಹರಾಜಿನ ನಂತರ, Jio ಮತ್ತು Airtel ದೀಪಾವಳಿಯ ಸಂದರ್ಭದಲ್ಲಿ ಕೆಲವು ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿವೆ. ಮುಂದಿನ ವರ್ಷ 2023 ರ ಅಂತ್ಯದ ವೇಳೆಗೆ, ಎಲ್ಲಾ ನಗರಗಳಲ್ಲಿ ಜಿಯೋ ಮತ್ತು ಏರ್ಟೆಲ್ನಿಂದ 5G ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.
Huge profit for Reliance Jio – Vi lost customers