ತೆಲಂಗಾಣ : ಕೆಲ ಯುವಕರು ಮಾನವೀಯತೆ ಮರೆತು ಕೋತಿಯೊಂದಕ್ಕೆ ನೇಣು ಬಿಗಿದು ರಾಕ್ಷಸರಂತೆ ಕೊಂದು ಅಟ್ಟಹಾಸ ಮೆರೆದಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ತೆಲಂಗಾಣ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸತುಪಲ್ಲಿ ನಿವಾಸಿಗಳಾದ ವೆಂಕಟೇಶ್ವರರಾವ್, ಗೌಡೆಲ್ಲಿ ಗಣಪತಿ, ರಾಜಶೇಖರ್ ಪ್ರಕರಣದ ಆರೋಪಿಗಳು.
ಏನಿದು ಘಟನೆ..?
ಪ್ರತಿ ದಿನ ಕೋತಿಗಳ ಗುಂಪೊಂದು ತೋಟಕ್ಕೆ ನುಗ್ಗಿ ಮಾವಿನ ಬೆಳೆ ನಾಶ ಮಾಡುತ್ತಿತ್ತು. ಇದರಿಂದ ತೋಟದ ಮಾಲೀಕ ವೆಂಕಟೇಶ್ವರ ರಾವ್ ರೋಸಿ ಹೋಗಿದ್ದ. ಎಂದಿನಂತೆ ಇಂದು ಕೂಡ ಮಂಗಗಳ ಗುಂಪು ತೋಟಕ್ಕೆ ನುಗ್ಗಿದೆ. ಇದರಲ್ಲಿ ಒಂದು ವೆಂಕಟೇಶ್ವರರಾವ್ ಮನೆ ಬಳಿ ಇದ್ದ ನೀರಿನ ತೊಟ್ಟಿಯಲ್ಲಿ ನೀರು ಕುಡಿಯಲು ಹೋಗಿ ಬಿದ್ದಿದೆ. ಈ ಕೋತಿಯನ್ನು ಹಿಡಿದ ಆತ ಇತರರೊಂದಿಗೆ ಸೇರಿ ತೋಟದ ಬಳಿ ಅದನ್ನು ತೆಗೆದುಕೊಂಡು ಹೋಗಿ, ಬೇರೆ ಕೋತಿಗಳನ್ನು ಹೆದರಿಸಲು, ಕೋತಿಗೆ ನೇಣು ಬಿಗಿದಿದ್ದಾನೆ.
ಇದರಿಂದ ಉಸಿರಾಡದೇ ಕೋತಿ ವಿಲ ವಿಲ ಎಂದು ಒಡ್ಡಾಡಿ ಪ್ರಾಣ ಬಿಟ್ಟಿದೆ. ಕೃತ್ಯದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.