ಈ ದೇಶದಲ್ಲಿ ಚಿಯರ್ಸ್ ಮಾಡುವುದು ಕಾನೂನು ಬಾಹಿರ.. ಇಲ್ಲಿ ಟ್ರೈನ್ ಓಡಿಸುತ್ತಾರೆ ಪುಟ್ಟ ಮಕ್ಕಳು.. ಹಾಗಾದ್ರೆ ಯಾವುದು ಈ ದೇಶ..?? ವಿಶೇಷತೆಗಳೇನು..??

1 min read

ಈ ದೇಶದಲ್ಲಿ ಏನಾದ್ರೂ ಕುಡಿದು ತಿನ್ನುವಾಗ ಚಿಯರ್ಸ್ ಅನ್ನುವುದು ಅಕ್ಷಮ್ಯ ಅಪರಾಧ… ನಿಷೇಧ. ವಿಶ್ವದ 2ನೇ ಅತ್ಯಂತ ಹಳೆಯದಾದ  ಮೆಟ್ರೋ ಇರುವುದು ಇದೇ ದೇಶದಲ್ಲಿ… ಈ ದೇಶದಲ್ಲಿ ತಂದೆ ತಾಯಿ ತಮ್ಮ ಮಕ್ಕಳ ಹೆಸರನ್ನು ತಮ್ಮಿಚ್ಛೆಯಂತೆ ಇಡುವಂತಿಲ್ಲ..  ಹೀಗೆ ಇನ್ನೂ ಸಾಕಷ್ಟು ವಿಶೇಷತೆಗಳನ್ನ ಒಳಗೊಂಡಿರುವ ಹಂಗ್ರಿ ದೇಶದ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ತಿಳಿದುಕೊಳ್ಳಲೇಬೇಕು..

ಈ ದೇಶದ ರಾಜಧಾನಿ ಬುಡಾಪೇನ್

ಯುರೋಪನ್ ನ ನಟ್ಟ ನಡುವಲ್ಲಿ ಬರುವ ಹಂಗ್ರಿ ದೇಶ ಕ್ರೊಯಾಟಿಯಾ  , ಸೊಲ್ವೇನಿಯಾ , ಆಸ್ಟ್ರಿಯಾ ,  ಸ್ಲೊವಾಕಿಯಾ , ಉಕ್ರೇನ್ , ರೊಮೇನಿಯಾ , ಸರ್ನಿಯಾ ಜೊತೆಗೆ ತನ್ನ ಗಡಿ ಹಂಚಿಕೊಂಡಿದೆ.

ಹಂಗ್ರಿಯ ಜನಸಂಖ್ಯೆ ಸುಮಾರು 1 ಕೋಟಿಗಿಂತಲೂ ಕಡಿಮೆ. 2019 ರ ಜನಗಣತಿ ಪ್ರಕಾರ ಈ ದೇಶದ ಒಟ್ಟಾರೆ ಜನಸಂಖ್ಯೆ ಸುಮಾರು 97 ಲಕ್ಷ..

ಒಟ್ಟು ಜನಸಂಖ್ಯೆಯ ಸುಮಾರು 28 % ರಷ್ಟು ಜನರು ಹಳ್ಳಿಗಳಲ್ಲಿ ಇದ್ರೆ , ಉಳಿದವರು ನಗರಗಳಲ್ಲಿದ್ದಾರೆ. ನಮ್ಮಲ್ಲಿ ಅಷ್ಟೇ ಅಲ್ಲ ಸಾಮಾನ್ಯವಾಗಿ ಬಹುತೇಕ ದೇಶಗಳಲ್ಲಿ  ಯಾವುದೇ ರೀತಿಯ ವಾಹನಗಳನ್ನ ( ಸೈಕಲ್ ಹೊರತಾಗಿ ) ಚಲಾಯಿಸಬೇಕಾದ್ರೆ  18 ವರ್ಷ ವಯಸ್ಸಾಗಿರಬೇಕು.. ಆದ್ರೆ ಈ ದೇಶದಲ್ಲಿ ಟ್ರೇನ್ ಓಡಿಸುವುದು ಅಪ್ರಾಪ್ತ ಮಕ್ಕಳು.. ಅದು ಕೂಡ ಸುಮಾರು 10 – 15 ವರ್ಷದೊಳಗಿನ ಮಕ್ಕಳೇ ಹೆಚ್ಚು. ಹಾಗಂತೆ ಎಲ್ಲಾ ಕಡೆಗಳಲ್ಲಿ ಅಲ್ಲ.. ಪ್ರತ್ಯೇಕವಾಗಿ ಒಂದು ರೈಲ್ವೇಯಲ್ಲಿ..

ಅಷ್ಟೇ ಅಲ್ಲ ಆಶ್ಚರ್ಯ , ನಂಬಲಸಾಧ್ಯ ಅಂದ್ರೆ ಇಲ್ಲಿನ ಸ್ಟೇಷನ್ ಮಾಸ್ಟರ್ , ಟಿಕೆಟ್ ವಿತರಣೆ ಮಾಡುವರು, ಟಿಟಿಗಳು ಕೂಡ ಮಕ್ಕಳೇ ಅನ್ನುವುದು..

ಇಲ್ಲಿ ಆಲ್ಕೋ ಹಾಲ್ ಇರಲಿ , ಮತ್ತೊಂದಿರಲಿ , ಕುಡಿಯುವಾಗ ತಿನ್ನುವಾಗ ಚೀರ್ಸ್ ಮಾಡುವುದು ಕಾನುನು ಬಾಹಿರ.. ಇದಕ್ಕೆ ಕಾರಣವೂ ಇದೆ.. ಹಂಗ್ರಿ ದೇಶವು ಯುದ್ಧವೊಂದ್ರದಲ್ಲಿ ಸೊಲನುಭವಿಸಬೇಕಾಗುತ್ತೆ.. ಆಗ ಆಸ್ಟ್ರಿಯಾ ಸೇನೆ ಹಂಗ್ರಿ ಸೇನೆಯ ಮುಂದೆ ಚಿಯರ್ಸ್ ಮಾಡಿ ಬಿಯರ್ ಕುಡಿದು ಸೆಲೆಬ್ರೇಟ್ ಮಾಡಲಾಗಿತ್ತು..

ನಮ್ಮ ದೇಶವೇ ಆಗ್ಲೀ ಇತರೇ ಯಾವುದೇ ದೇಶವಾಗ್ಲಿ ಮಕ್ಕಳಿಗೆ ಪೋಷಕರು ತಮ್ಮ ಇಷ್ಟದ ಹೆಸರುಗಳನ್ನ ಇಡಬಹುದು.. ಆದ್ರೆ  ಈ ದೇಶದಲ್ಲಿ ತಮ್ಮ ಮಕ್ಕಳಿಗೆ ತಮಗಿಷ್ಟದ ಹೆಸರು ಇಡುವ ಹಕ್ಕು ಪೋಷಕರಿಗೆ ಇರುವುದಿಲ್ಲ. ದೇಶವು ಕೊಟ್ಟಿರುವ ಹೆಸರುಗಳ ಪಟ್ಟಿಯಿಂದ ಆಯ್ದು ಹೆಸರಿಡಬೇಕಾಗುತ್ತದೆ.. ರೂಬಿಕ್ಸ್ ಕ್ಯೂಬ್ ಅಥವ ಕಲರ್ ಕ್ಯೂಬ್ಸ್ ಗಳು ಶುರುವಾಗಿದ್ದು ಹಂಗ್ರಿಯಿಂದ್ಲೇ..

ಈ ದೇಶದ ಜನರು  ಪ್ರತಿ ಕ್ಯಾಟಗಿರಿಯಲ್ಲು ವಿಶ್ವದ  ಅತ್ಯಂತ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಗೆದ್ದಿದ್ದಾರೆ.. ಆದ್ರೆ ಇಲ್ಲಿವರೆಗೂ ನೋಬೆಲ್ ಪೀಸ್ ಪ್ರೈಸ್ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ.. ಇಲ್ಲಿವರೆಗೂ ಈ ದೇಶದ 13 ಜನರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇಲ್ಲಿನ ಜನಪ್ರಿಯ ಆಟ ಚೆಸ್.. ಹಂಗ್ರಿ ದೇಶದಲ್ಲಿ 96 ನಂಬರ್ ಗೆ ತುಂಬಾ ಪ್ರಾಮುಖ್ಯತೆ ಇದೆ.. ಕಾರಣ ಈ ದೇಶದ ಸ್ಥಾಪನೆಯಾಗಿದ್ದು 8896ರಲ್ಲಿ.. ಈ ದೇಶದ ರಾಷ್ಟ್ರ ಗೀತಿಯು ಕೂಡ 96 ಸೆಕೆಂಡ್ ನ ಒಳಗೆ ಮುಗಿಯುತ್ತದೆ. ಹಾಲಿವುಡ್ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್ ಗಳಾದ ಪ್ಯಾರಾಮೌಂಟ್ ಪಿಕ್ಚರ್ಸ್ , ಫಾಕ್ಸ್ ನಂತಹ ಸಂಸ್ಥೆಗಳು ಆರಂಭವಾಗಿದ್ದು ಹಂಗ್ರಯಿಂದಲೇ..

ವಿಶ್ವದಲ್ಲೇ ಮಾತನಾಡಲು , ಕಲಿಯಲು ಅತಿ  ಕಷ್ಟಕರವಾದ ಭಾಷೆ ಹಂಗೇರಿಯನ್ ಎಂದು ಪರಿಗಣಿಸಲಾಗಿದೆ. ಆದ್ರೆ ಈ ದೇಶದ ಭಾಷೆ ಹಂಗೇರಿಯನ್ ಆದ್ರೂ ಸುಮಾರು 70 % ರಷ್ಟು ಜನರು ಇಂಗ್ಲಿಷ್ ಮಾತನಾಡುತ್ತಾರೆ. ಈ ದೇಶದ ಆರ್ಥಿಕಥೆಯ ಬಹುದೊಡ್ಡ ಮೂಲ ಪ್ರವಾಸೋದ್ಯಮ.. ಪ್ರತಿ ವರ್ಷ ಈ ದೇಶಕ್ಕೆ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಸುಮಾರು 20 ಮಿಲಿಯನ್.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd