ಬಂಡೀಪುರ : ಕರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕಾಡೌನ್ ಯಿಂದಾಗಿ ಮಾಂಸ ಎಲ್ಲೂ ಸಿಗದೇ ಇರುವುದರಿಂದ ಬಂಡೀಪುರ ಅಭಯಾರಣ್ಯದಲ್ಲಿ ಇತ್ತೀಚಗೆ ಬೇಟೆಗಾರರು ಹಾವಳಿ ಮಿತಿಮೀರಿ ನಡೆಯುತ್ತಿದ್ದ. ಕಡಿವಾಣ ಹಾಕುವಳಿ ಅರಣ್ಯ ಇಲಾಖೆ. ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆಗಾರರು ಸಕ್ರಿಯವಾಗಿದ್ದು ಜಾಲ ವ್ಯಾಪಕವಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಬಂಡೀಪುರ ಅರಣ್ಯಾಧಿಕಾರಿ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನ ನಿರ್ದೇಶಕ ಟಿ.ಬಾಲಚಂದ್ರಗೆ ಪತ್ರ ಬರೆದಿರುವುದು ಕಂಡು ಬಂದಿದೆ
ಬಂಡೀಪುರದಲ್ಲಿ ಬೇಟೆಗಾರರ ವ್ಯಾಪಕ ಜಾಲರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಜಿಂಕೆ ಮೊಲ.ಕಾಡುಬೆಕ್ಕು ಹಾಗೂ ಕಡವೆಗಳನ್ನು ಬೇಟೆಯಾಡಿ, ಮಾಂಸವನ್ನು ನೂರಾರು ರೂಪಾಯಿಗೆ ಮಾರಾಟ ಮಾಡುತ್ತಿರುವುದು
ಇತ್ತಿಚೆಗೆ ಕಂಡು ಬಂದಿದೆ
ಇದನ್ನು ಗಮನಿಸಿರುವ ಎನ್.ಟಿ.ಸಿ.ಎ.ಅರಣ್ಯ ಇಲಾಖೆಯ ಜನರಲ್ ಇನ್ ಪೆಕ್ಟರ್ ಎನ್.ಎಸ್.ಮುರುಳಿ ಬಂಡೀಪುರ ಅಭಯಾರಣ್ಯದ.
ಪ್ರದೇಶಗಳಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿರುವ ಕುರಿತು ಎನ್ಟಿಸಿಎ ತನ್ನ ಮೂಲಗಳಿಂದ ಮಾಹಿತಿ ಕಲೆಹಾಕಿ ಅರಣ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚಿಸಿದೆ
ಲಾಕ್ಡೌನ್ ಸಮಯವನ್ನು ಕಳ್ಳಬೇಟೆಗಾರರು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಕುರಿತು ಅರಣ್ಯ ಇಲಾಖೆ ಎಚ್ಚರಿಸಿ, ಸೂಕ್ತ ಗಸ್ತು ಮತ್ತು ಕರ್ತವ್ಯ ಬಿಗಿಗೊಳಿಸುವಂತೆ ಪ್ರಾಧಿಕಾರ ಸೂಚಿಸಿದೆ. ಕಳ್ಳಬೇಟೆಗಾರರ ಜಾಲ ದೊಡ್ಡದಿದ್ದು, ಮಾಂಸ ಮಾರಾಟದ ದಂಧೆಯಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ
ಎನ್ನಲಾಗಿದೆ.
ಮಾಂಸ ಮಾರಾಟ ದಂಧೆಯಲ್ಲಿ ಅರಣ್ಯ ಇಲಾಖೆಯಲ್ಲಿ ಸಹಾಯ ಪಡೆದಂತಹವರೆ ಪಾಲುದಾರರು ಆಗಿರುವುದು ತಿಳಿದೆ ಗಿರಿಜನ ಲ್ಯಾಂಬ್ಸ್ ಸೂಸೈಟಿಯ ಅಧ್ಯಕ್ಷ ಮುದ್ದಯ್ಯನ ಮಗ ಶಿವಕುಮಾರ್ ಇತ್ತಿಚೆಗೆ ಬಂಧಿಸಲಾಗಿದೆ ಹಾಗೂ ಬೆಂಕಿ ವಾಚರಗಳಾ ಕೆಲಸ ಮಾಡಿ ಆರು ಜನ ಇತ್ತೀಚಿನ ಮೂರು ಜಿಂಕೆ ಬೇಟೆಯಾಡುವಾಗ ಬಂಧಿಸಲಾಯಿತ್ತು ಇಲಾಖೆಯಲ್ಲಿ ಕೆಲಸ ಮಾಡಿರುವವರೆ ಪಾತ್ರವಿರುವುದಾಗಿ ಆರೋಪ ಕೇಳಿಬಂದಿದ್ದು.
ಬಂಡೀಪುರದಲ್ಲಿ ಬೇಟೆಗಾರರ ಜಾಲ ವ್ಯಾಪಕಬಂಡೀಪುರದಲ್ಲಿ ಬೇಟೆಗಾರರ ಜಾಲ ವ್ಯಾಪಕಜಿಂಕೆ ಮಾಂಸ ದಂಧೆಯಲ್ಲಿ ಅಧಿಕಾರಿಗಳು, ರಾಜಕೀಯ ಮುಖಂಡರ ಮೂಲಕವೇ ಪಟ್ಟಣದ ಕೆಲ ಹೋಟೆಲ್ಗಳಿಗೆ ಮಾಂಸ ಸರಬರಾಜು ಆಗುತ್ತಿದೆ
ಗುಂಡ್ಲುಪೇಟೆ ಹಿಂದೆ ಎ.ಸಿ.ಎಫ್.ಆಗಿದ್ದಂತಹ ಅಧಿಕಾರಿಯೊಬ್ಬರು ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್ ಮೇಲೆ ದಾಳಿ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿತ್ತು ಏಕಾಏಕಿ ಆ ಅಧಿಕಾರಿಗಳು ವರ್ಗಾವಣೆ ಆಗಿದ್ದರಿಂದ ಮಾಂಸ ದಂಧೆ ನಿರಂತರವಾಗಿಹೆಚ್ವು ಜಾಲ ಬೆಳೆಯಲು ಕಾರಣವಾಗಿದೆ
ಪ್ರಮುಖವಾಗಿ ಬೇಟೆಗಳೂ
# ಮಾರ್ಚ್ 28ರಂದು ಬಂಡೀಪುರ ಅಭಯಾರಣ್ಯ ಗುಂಡ್ರೆ ವಲಯದಲ್ಲಿ ಬೇಟೆಯಾಡಲು ಅರಣ್ಯ ಪ್ರವೇಶ ಮಾಡಿ ನಾಲ್ಕು ಜನರನ್ನು ಬಂಧ ಮಾಡಲಾಯಿತು.
#ಮಾರ್ಚ್ 31ರಂದು ಗುಂಡ್ಲುಪೇಟೆ ಬಫರ ಜೋನ್ ವಲಯದ ತೆರಕಣಾಂಬಿ ಗುಡ್ಡದಲ್ಲಿ ನಾಲ್ಕು ಬೆಕ್ಕು,ಮೂರುಮೊಲ,ಭೇಟೆ ಆಡುತ್ತಿದ ಒಬ್ಬನ ಬಂಧನ ಮಾಡಗಿದೆ.
#ಏಪ್ರಿಲ್17ರಂದು ಗೋಪಾಲಸ್ವಾಮಿ ಬೆಟ್ಟ ವಲಯ ಹೊಸಹಳ್ಳಿಗುಡ್ಡದಲ್ಲಿ ಮೂರು ಜಿಂಕೆಗಳು ಭೇಟೆಯಾಡಿದ ಎಂಟು ಜನರ ಬಂಧನ ಮಾಡಲಾಗಿದೆ. ಇದರಲ್ಲಿ ಆರು ಜನರ ಬೆಂಕವಾಚರ್ ಆಗಿ ಕೆಲಸ ಮಾಡಿರುವುದು ವಿಶೇಷವಾಗಿದೆ.
# ಏಪ್ರಿಲ್28ರಂದು ಗುಂಡ್ಲುಪೇಟೆ ಬಫರಜೋನಗೆ ಸೇರಿದ ಕಂದೇಗಾಲಗುಡ್ಡದಲ್ಲಿ ಒಂದು ಜಿಂಕೆ ಬೇಟೆಯಾಡಿದ ಮೂವರ ಬಂಧನ ಮಾಡಲಾಗಿದೆ ಇದರಲ್ಲಿ ಗಿರಿಜನ ಮುಖಂಡನ ಪುತ್ರ ಮಾಂಸವನ್ನು ಖರೀದಿ ಮಾಡಿ ಹೋಟೆಲಗಳಿಗೆ ಕೆಜಿಗೆ 300ಮಾರಾಟ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ
# ಏಪ್ರಿಲ್13ರಂದು ಬಂಡೀಪುರ ಅಭಯಾರಣ್ಯದ ಎನ್.ಬೇಗೂರು, ಗುಂಡ್ರೆ ವಲಯಗಳಲ್ಲಿ ಬೇಟೆಗಾರರು ಹಾಕಿದಂತಹ ಉರುಳು ಹುಲಿಯ ಗುತ್ತಿಗೆ ಸುತ್ತಿಕೊಂಡು ಸೋಂಕಿನಿಂದ ಕೇರಳದ ವೈನಾಡ್ ಅರಣ್ಯ ಪ್ರದೇಶದ ಕುರುಚಿಯಾಡ್ ವಲಯದ ತತೂರು ಪ್ರದೇಶದಲ್ಲಿ ಹುಲಿ ಸಾವನ್ನಪ್ಪಿತ್ತು ಇದರ ಬಗ್ಗೆ ವರದಿ ನೀಡುವಂತೆ.ಎನ್.ಟಿ.ಸಿ.ಎ. ಕೇರಳ ಮತ್ತು ಕರ್ನಾಟಕದ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ