ಹೆಂಡತಿ ತವರಿನಿಂದ ಮರಳಲು ನಿರಾಕರಿಸಿದಕ್ಕೆ ನಾಲಿಗೆಯನ್ನೇ ಕತ್ತರಿಸಿಕೊಂಡ..!
ಗಂಡ ಹೆಂಡತಿ ನಡುವೆ ಜಗಳ ಸಹಜ. ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಕೊಲೆಗಳು ನಡೆದುಹೋಗುತ್ತವೆ, ಡೈವೋರ್ಸ್ ಆಗಿರುವುದು ಉಂಟು. ಆದ್ರೆ ಉತ್ತರಪ್ರದೇಶದ ಕಾನ್ಪುರದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲಿನ ಕೋಪಕ್ಕೆ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ.
ಈತ ಬೇಗನೇ ತಾಳ್ಮೆ ಕಳೆದುಕೊಳ್ತಿದ್ದ ಚಿಕ್ಕಚಿಕ್ಕ ವಿಚಾರಗಳನ್ನ ದೊಡ್ಡದು ಮಾಡಿ ಪತ್ನಿ ಜೊತೆ ಜಗಳವಾಡುತ್ತಲೇ ಇದ್ದ. ಇದರಿಂದ ಬೇಸರಗೊಂಡಿದ್ದ ಪತ್ನಿ ತನ್ನ ತವರು ಮನೆಗೆ ಹೋಗಿದ್ದಳು ಎನ್ನಲಾಗಿದೆ. ಆದ್ರೆ ಹೆಂಡತಿ ಮನೆಗೆ ವಾಪಸ್ ಬರುವಂತೆ ಪತಿ ಕೇಳಿಕೊಂಡಿದ್ದಾನೆ . ಆದ್ರೆ ಆಕೆ ಇದಕ್ಕೆ ನಿರಾಕರಿಸಿದ್ದಾಳೆ.
ಮುಂಬೈನಲ್ಲಿ ಮದುವೆ ಮಾಡಿಕೊಂಡ ನವದಂಪತಿಗೆ 50 ಸಾವಿರ ರೂ. ದಂಡ..!
ಸಿಟ್ಟಿನಿಂದ ಆತ ತನ್ನ ನಾಲಿಗೆ ಕತ್ತರಿಸಿಕೊಂಡಿದ್ದಾನೆ. ಅವನು ನೋವಿನಲ್ಲಿ ಕಿರುಚಾಡಿದ್ದನ್ನ ಕೇಳಿಸಿಕೊಂಡು ಸ್ಥಳೀಯರು ಓಡಿ ಹೋಗಿ ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಹುಚ್ಚು….. ಅನ್ನೋದು ಇದನ್ನೇ ನೋಡಿ… ಚನ್ನಾಗಿರೋ ಮುಖವನ್ನ ಬೇಕಂತ್ಲೇ ಈ ರೀತಿ ಹಾಳು ಮಾಡಿಕೊಳ್ಳೋರನ್ನ ನೋಡಿದ್ದೀರಾ..!
‘ಮುಂದುವರೆದ ಅಧ್ಯಾಯ’ದಲ್ಲಿ ಆದಿತ್ಯನ ಆರ್ಭಟ..!