ಮದುವೆಯಾದ ತಿಂಗಳಲ್ಲೇ ಚಲಿಸುತ್ತಿದ್ದ ರೈಲಿನಿಂದ ಹೆಂಡತಿಯನ್ನ ಹೊರತಳ್ಳಿ ಕೊಲೆ ಮಾಡಿದ

1 min read

ಮದುವೆಯಾದ ತಿಂಗಳಲ್ಲೇ ಚಲಿಸುತ್ತಿದ್ದ ರೈಲಿನಿಂದ ಹೆಂಡತಿಯನ್ನ ಹೊರತಳ್ಳಿ ಕೊಲೆ ಮಾಡಿದ

ಮುಂಬೈ: ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ನಡುವೆ ಯಾವುದೋ ವಿಚಾರವಾಗಿ ಗಕಾಟೆ ನಡೆದಿದೆ. ಅಷ್ಟಕ್ಕೆ ಆ ವ್ಯಕ್ತಿ ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ತಳ್ಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಗೋವಾಂದಿ ರೈಲ್ವೆ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ.

31 ವರ್ಷದ ಪತಿ 27 ವರ್ಷದ ಪತ್ನಿಯನ್ನ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಈ ದಂಪತಿ ಕೂಲಿ ಕಾರ್ಮಿಕರಾಗಿದ್ದರು. ಮೃತ ಪತ್ನಿಗೆ ಈ ಹಿಂದೆಯೇ ಮದುವೆಯಾಗಿತ್ತು. ಆರೋಪಿ ಜೊತೆಗೆ ಆಕೆ 2ನೇ ಮದುವೆಯಾಗಿದ್ದಳು. ಆರೋಪಿ ಜೊತೆಗೆ ಮದುವೆಗೂ ಮುನ್ನವೇ ಆಕೆಗೆ 7 ವರ್ಷದ ಮಗುವಿತ್ತು. ಆದ್ರೆ ಆತ ಮಹಿಳೆಯನ್ನ ಸಾಯಿಸಿದಕ್ಕೆ ಇನ್ನೂ ತಿಳಿದುಬಂದಿಲ್ಲ. ಛೇಂಬರ್ ಮತ್ತು ಗೋವಾಂದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿದ್ದು, ಪತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಮಗ ಸತ್ತ 9 ತಿಂಗಳ ನಂತರ, 1 ವರ್ಷ ಹಿಂದೆಯೇ ಬರೆದಿದ್ದ ಡೆತ್ ನೋಟ್ ಪತ್ತೆ : ಪತ್ರದಲ್ಲಿತ್ತು ಪತ್ನಿಯ ಕಮಪುರಾಣ..!

ಘಟನೆಯ ವಿವರಕ್ಕೆ ಬರುವುದಾದರೆ , ದಂಪತಿ ರೈಲಿನಲ್ಲಿ ಹೋಗುತ್ತಿದ್ದ ವೇಳೆ ಮಹಿಳೆ ರೈಲಿನ ದ್ವಾರದ ಬಳಿ ನಿಂತುಕೊಂಡಿದ್ದಳಂತೆ. ಆಕೆಯನ್ನು ಒಳಕ್ಕೆ ಕರೆದುಕೊಳ್ಳುವ ನೆಪದಲ್ಲಿ ಆಕೆಯನ್ನ ಆತ ಹೊರದಬ್ಬಿರೋದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆ ಆದ ತಕ್ಷಣವೇ ರೈಲನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸುವ ಹೊತ್ತಿಗೆ ಮಹಿಳೆ ಸ್ಥಿತಿ ಗಂಭೀರವಾಗಿತ್ತು ಎನ್ನಲಾಗಿದೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಅಷ್ಟರಲ್ಲೇ ಮಹಿಳೆ ಮೃತಪಟ್ಟಿದ್ದಾಳೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd