Hassan | ಕೋರ್ಟ್ ಆವರಣದಲ್ಲೇ ಕತ್ತು ಕೊಯ್ದ!
ಮಗುವನ್ನು ಕೊಲ್ಲಲು ಯತ್ನಿಸಿದ ಪಾಪಿ
ಹಾಸನದ ಹೊಳೆನರಸೀಪುರದಲ್ಲಿ ಘಟನೆ
ತಟ್ಟೆಕೆರೆಯ ಚೈತ್ರಾ ಮೃತ ದುರ್ದೈವಿ
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚೈತ್ರಾ ಸಾವು
ಹಾಸನ : ಪತಿಯೇ ಕೋರ್ಟ್ ಆವರಣದಲ್ಲಿ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಕೋರ್ಟ್ ಆವರಣದಲ್ಲಿ ನಡೆದಿದೆ.
ತಟ್ಟೆಕೆರೆ ಗ್ರಾಮದ ಚೈತ್ರಾ ಕೊಲೆಯಾದವರಾಗಿದ್ದಾರೆ. ಶಿವಕುಮಾರ್ ಕೊಲೆ ಆರೋಪಿಯಾಗಿದ್ದಾರೆ.
ಈ ಇಬ್ಬರಿಗೆ ಏಳು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದ್ರೆ ಇಬ್ಬರಲ್ಲಿ ಹೊಂದಾಣಿಕೆ ಇಲ್ಲದ ಕಾರಣ, ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು.
ಅದರಂತೆ ಇಂದು ಹೊಳೆನರಸೀಪುರ ಹಿರಿಯ ಸಿವಿಲ್ ಕೋಟ್ ನಲ್ಲಿ ರಾಜಿ ಸಂಧಾನ ಮಾತುಕತೆಗಾಗಿ ಬಂದಿದ್ದರು.
ಈ ವೇಳೆ ಲೋಕ್ ಅದಾಲತ್ ನಲ್ಲಿ ಪತ್ನಿ ಜೊತೆ ಇರುವುದಾಗಿ ಪತಿ ಶಿವಕುಮಾರ್ ಒಪ್ಪಿಕೊಂಡಿದ್ದ.
ಇದಾದ ಬಳಿಕ ಕೋರ್ಟ್ ನಿಂದ ಹೊರ ಬಂದ ಶಿವಕುಮಾರ್, ಶೌಚಾಲಯದಲ್ಲಿ ಪತ್ನಿ ಚೈತ್ರಾಳ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ.
ಅಲ್ಲದೇ ಅಲ್ಲಿಂದ ಓಡಿ ಹೋಗಲು ಯತ್ನಿಸಿದ ಶಿವಕುಮಾರ್ ಅವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇತ್ತ ರಕ್ತದ ಮಡುವಿನಲ್ಲಿದ್ದ ಚೈತ್ರಾಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಚೈತ್ರ ಕೊನೆಯುಸಿರೆಳೆದಿದ್ದಾರೆ.
ಇನ್ನು ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.