ವಿಮಾ ಹಣಕ್ಕಾಗಿ ಪತ್ನಿಯನ್ನು ಕೊಂದ ಪತಿಯ ಅಸಲಿಯತ್ತು ಬಯಲಾಗಿದ್ದು ಹೇಗೆ ಗೊತ್ತಾ..!
ಗುಜರಾತ್ : ವಿಮಾ ಹಣಕ್ಕಾಗಿ ಪತಿಯೊಬ್ಬ ಸ್ಕೆಚ್ ಹಾಕಿ ಪತ್ನಿಯನ್ನು ಕೊಂದು ರಸ್ತೆ ಅಪಘಾತ ಎಂದು ಸುಳ್ಳು ಕಥೆ ಕಟ್ಟಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಗುಜರಾತ್ ನಲ್ಲಿ ಘಟನೆ ನಡೆದಿದ್ದು, ವೃತ್ತಿಯಲ್ಲಿ ಅಕೌಂಟೆಂಟ್ ಆಗಿರೋ ಲಲಿತ್ ಟಂಕ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಡಿಸೆಂಬರ್ 26ರಂದು ಬಿಲ್ದಿ ಪೊಲೀಸ್ ಠಾಣೆಯಲ್ಲಿ ದಕ್ಷಬೆನ್ ಟಂಕ್ ಎಂಬ ಮಹಿಳೆ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾಗಿ ಕೇಸು ದಾಖಲಾಗಿತ್ತು.
ಮಾರ್ಚ್ 1ರಿಂದ ಎಚ್ -1ಬಿ ವೀಸಾ ಅರ್ಜಿ ನೋಂದಣಿ ಪ್ರಕ್ರಿಯೆ ಆರಂಭ
ಕೆಲ ದಿನಗಳ ನಂತರ ಮಹಿಳೆಯ ಸಂಬಂಧಿಕರು ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಬಳಿಕ ಗಂಡನ ವಿಶ್ವರೂಪ ಬಯಲಾಗಿದೆ. ಆಕೆಯ ಪತಿ ಲಲಿತ್ , ಕಿರಿತ್ ಮಾಲಿ ಎಂಬುವವನಿಗೆ 2 ಲಕ್ಷ ರೂಪಾಯಿಯ ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿ ರಸ್ತೆ ಅಪಘಾತ ಎಂದು ಕಾಣುವಂತೆ ಮಾಡಲು ತಿಳಿಸಿದ್ದ ವಿಚಾರ ಗೊತ್ತಾಗಿದೆ. 3 ತಿಂಗಳ ಹಿಂದೆ ಮಾಡಿಸಿದ್ದ ಎಲ್ ಐಸಿ ಪಾಲಿಸಿಯಲ್ಲಿ 60 ಲಕ್ಷ ರೂಪಾಯಿ ಬರಬೇಕೆಂದು ಪತಿ ಟಂಕ್ ಹೀಗೆ ಮಾಡಿದ್ದನೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪಾಕಿಸ್ತಾನಕ್ಕೆ ಚೀನಾದಿಂದ ನೌಕಾ ಕ್ಷಿಪಣಿ ಹಡಗಿನ ಮಾರಾಟ
ಚಿಕ್ಕಬಳ್ಳಾಪುರ : ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಕೊಲೆ
ಕಾಂಗ್ರೆಸ್ ಮಹತ್ವದ ಹೆಜ್ಜೆ : ಕ್ರಿಮಿನಲ್ ಹಿನ್ನೆಲೆಯುಳ್ಳ ಯುವ ಪದಾಧಿಕಾರಿಗಳಿಗೆ ಶಾಕ್
ಶರದ್ ಪವಾರ್ ರಿಂದ ಸಚಿನ್ ತೆಂಡುಲ್ಕರ್ ಗೆ ರಾಜಕೀಯ ಪಾಠ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








