ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶರದ್ ಪವಾರ್ ರಿಂದ ಸಚಿನ್ ತೆಂಡುಲ್ಕರ್ ಗೆ ರಾಜಕೀಯ ಪಾಠ..!

admin by admin
February 7, 2021
in Newsbeat, Sports, ಕ್ರೀಡೆ
sachin sharad pawar saakshatv
Share on FacebookShare on TwitterShare on WhatsappShare on Telegram

ಶರದ್ ಪವಾರ್ ರಿಂದ ಸಚಿನ್ ತೆಂಡುಲ್ಕರ್ ಗೆ ರಾಜಕೀಯ ಪಾಠ..!

sachin sharad pawar saakshatvನಮ್ಮದಲ್ಲದ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದು ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಹಾಗಿದ್ರೆ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷರಾಗಿರುವುದನ್ನು ಮರೆತಂತಿದೆ. ರಾಜಕೀಯ ಕ್ಷೇತ್ರದಲ್ಲಿರುವ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಎಷ್ಟರ ಮಟ್ಟಿಗೆ ಸರಿ. ದಿ. ಜಗನ್ ಮೋಹನ್ ದಾಲ್ಮಿಯ ಅವರನ್ನು ಮಣಿಸಲೇಬೇಕು ಎಂದು ತನ್ನ ಪ್ರಭಾವವನ್ನು ಬಳಸಿಕೊಂಡು ಬಿಸಿಸಿಐ ಅಧ್ಕಕ್ಷಗಾದಿಯನ್ನು 2005ರಲ್ಲಿ ಏರಿದ್ದರು. ಆದಾದ ನಂತರ 2010ರಲ್ಲಿ ಐಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಹಾಗಂತ ಶರದ್ ಪವಾರ್ ಬಿಸಿಸಿಐ ಮತ್ತು ಐಸಿಸಿ ಅಧ್ಯಕ್ಷರಾಗಿರುವುದು ತಪ್ಪೇನೂ ಅಲ್ಲ. ಆದ್ರೆ ಸಚಿನ್ ಮಾತನಾಡಿರುವುದರಲ್ಲಿ ತಪ್ಪೇನಿದೆ. ಒಪ್ಪಿಕೊಳ್ಳೋಣ.. ಸಚಿನ್ ತೆಂಡಲ್ಕರ್ ರೈತರ ಪ್ರತಿಭಟನೆಯ ಬಗ್ಗೆ ಏನು ಮಾತನಾಡಿಲ್ಲ. ರೈತರ ಪ್ರತಿಭಟನೆಯ ಪರವಾಗಿಯೂ ಮಾತನಾಡಿಲ್ಲ..ವಿರುದ್ಧವಾಗಿಯೂ ಮಾತನಾಡಿಲ್ಲ. ತಟಸ್ಥ ನಿಲುವನ್ನು ಹೊಂದಿದ್ದಾರೆ.
ಆದ್ರೆ ರಿಯಾನ ಟ್ವಿಟ್ ಪ್ರತಿಕ್ರಿಯೆ ನೀಡಿರುವುದೇ ದೊಡ್ಡ ತಪ್ಪು ಅಂತ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ಸಚಿನ್ ಹೇಳಿಕೆಯನ್ನು ದೇಶ ದ್ರೋಹಿ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸಚಿನ್ ತೆಂಡುಲ್ಕರ್ ಹೇಳಿರೋದು ಏನು.. ದೇಶದ ಅಂತರಿಕ ವಿಚಾರದಲ್ಲಿ ಬೇರೆಯವರು ಮಾತನಾಡುವುದು ಬೇಡ ಎಂದು ಹೇಳಿದ್ದಾರೆ. ಅದು ಅವರ ಅಭಿವ್ಯಕ್ತ ಸ್ವಾತಂತ್ರ್ಯ. ಹಾಗಂತ ಅದನ್ನೇ ಪ್ರಶ್ನೆ ಮಾಡಿಕೊಂಡು ಅವರ ವ್ಯಕ್ತಿತ್ವವನ್ನೇ ಪ್ರಶ್ನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ… ಒಂದು ವೇಳೆ ಸಚಿನ್ ತೆಂಡುಲ್ಕರ್ ರೈತರ ಪ್ರತಿಭಟನೆಯ ಪರವಾಗಿ ಮಾತನಾಡುತ್ತಿದ್ರೆ ಸಚಿನ್ ಕ್ರಿಕೆಟ್ ದೇವ್ರು ಮಾತ್ರವಲ್ಲ.. ಭಾರತದ ದೇವ್ರರಾಗುತ್ತಿದ್ದರಾ ? ಹಾಗೇ ಸಚಿನ್ ಪ್ರತಿಭಟನೆಯ ವಿರುದ್ಧವಾಗಿ ಮಾತನಾಡುತ್ತಿದ್ರೆ ಇನ್ನೊಂದು ವರ್ಗಕ್ಕೆ ವಿಲನ್ ಆಗಿರುತ್ತಿದ್ದರು.
sachin tendulkar sharad pawar saakshatvಇಲ್ಲಿ ಇನ್ನೊಂದು ಪ್ರಶ್ನೆ ಇದೆ. ಈ ದೇಶದಲ್ಲಿ ಮೋದಿ, ಅಮಿತ್ ಶಾ ಬಿಟ್ರೆ ಬೇರೆ ನಾಯಕರೇ ಇಲ್ವಾ ? ಅಂಬಾನಿ ಬಿಟ್ರಿ ಬೇರೆ ಉದ್ಯಮಿಗಳೇ ಇಲ್ವಾ ? ಮಾತು ಮಾತಿಗೂ ಮೋದಿ, ಅಮಿತ್ ಶಾ, ಅಂಬಾನಿ ಅಂತ ಬಿಟ್ಟಿ ಪ್ರಚಾರವನ್ನು ನೀಡುತ್ತಿದ್ದಾರೆ. ಹೀಗಾಗಿಯೇ ಅವರು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ಅದನ್ನು ಬಿಟ್ಟು ಬೇರೆ ನಾಯಕರ ಬಗ್ಗೆ ಯಾರು ಮಾತನಾಡುತ್ತಿಲ್ಲ.
ಇನ್ನು, ರೈತರ ಪ್ರತಿಭಟನೆಗೆ ಬಹುತೇಕ ವಿರೋಧ ಪಕ್ಷಗಳು ಬೆಂಬಲ ವ್ಯಕ್ತ ಪಡಿಸುತ್ತಿವೆ. ಪ್ರತಿಭಟನೆ ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾತ್ರ ಸೀಮಿತವಾಗಿದೆಯಾ ?
ನೂತನ ಕೃಷಿ ನೀತಿಯ ಮೂರು ಕಾಯ್ದೆಗಳು ರೈತ ವಿರೋಧಿಯಾಗಿರುತ್ತಿದ್ರೆ, ಎಲ್ಲಾ ರಾಜ್ಯಗಳ ವಿಪಕ್ಷ ಪಕ್ಷಗಳ ನಾಯಕರು ಸುಮ್ಮನೆ ಯಾಕೆ ಕೂರುತ್ತಿದ್ದಾರೆ. ಆಯ್ತು ಆಡಳಿತರೂಢ ರಾಜ್ಯಗಳ ನಾಯಕರು ಯಾಕೆ ಮೌನಕ್ಕೆ ಶರಣಾಗಿದ್ದಾರೆ.
ರೈತರ ಪ್ರತಿಭಟನೆಯ ಸ್ಥಳಕ್ಕೆ ಹೋಗಿ ಭಾಷಣ ಮಾಡಿದ್ರೆ ಎಲ್ಲವೂ ಸರಿ ಹೋಗುತ್ತದೆಯಾ ? ರೈತ ಪರ ನಿಲುವನ್ನು ಹೊಂದಿರುವ ರಾಜಕೀಯ ಪಕ್ಷಗಳ ಮುಖಂಡರುಗಳು ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರೈತರಂತೆ ಹೋರಾಟ ಯಾಕೆ ಮಾಡುತ್ತಿಲ್ಲ…!
ಇಲ್ಲಿ ಹೋರಾಟ ಮಾಡುವ ಮನೋಭಾವನೆ ಯಾರಿಗೂ ಇಲ್ಲ. ವಿರೋಧ ವ್ಯಕ್ತಪಡಿಸಬೇಕು.. ವಿರೋಧಿಸಬೇಕು.. ಅಷ್ಟಕ್ಕೆ ಸೀಮಿತವಾಗಿದೆ. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲ ತಾಣವಿದೆಯಲ್ಲ..ಅಭಿವ್ಯಕ್ತಿಯ ಸ್ವಾತಂತ್ರ್ಯದ ವೇದಿಕೆ. ಅಲ್ಲಿ ಬರೆದ್ರೆ ಮುಗಿದು ಹೋಯ್ತು…!
ಇನ್ನು ಸಚಿನ್ ವಿಚಾರಕ್ಕೆ ಬರೋದಾದ್ರೆ, ಕೆಲವರು ಸಚಿನ್ ಏನು ಸಾಧನೆ ಮಾಡಿದ್ದಾನೆ… ಮಗನ ಕೆರಿಯರ್ ಗೋಸ್ಕರ ಅಂಬಾನಿ, ಅಮಿತ್ ಶಾ ಅವರನ್ನು ಒಲೈಕೆ ಮಾಡುತ್ತಿದ್ದಾನೆ ಅಂತ ಕಮೆಂಟ್ ಗಳು ಬಂದಿವೆ.
ಸಚಿನ್ ಮಗನಿಗೋಸ್ಕರ ಎಲ್ಲವನ್ನೂ ಮಾಡಿದ್ದಾನೆ. ಅವನಿಗೆ ಕ್ರಿಕೆಟ್ ಆಡಿ ದುಡ್ಡು ಸಂಪಾದನೆ ಮಾಡಬೇಕು ಅಂತೇನೂ ಇಲ್ಲ. ಯಾಕಂದ್ರೆ ಸಚಿನ್ ಕ್ರಿಕೆಟ್ ಮತ್ತು ಜಾಹಿರಾತಿನಿಂದಲೇ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ. ಅಂಬಾನಿ ಜೊತೆ ನಿಂತುಕೊಂಡು ಹಣ ಮಾಡುವ ದುರಾಸೆ ಇಲ್ಲ.
arjun tendulkar sachin tendulkar ipl 2021 saakshatvಇನ್ನು ಏನು ಸಾಧನೆ ಮಾಡಿದ್ದಾನೆ ಅಂತರಲ್ಲ.. ಅವರಿಗೆ ತಾವು ಏನು ಸಾಧನೆ ಮಾಡಿದ್ದೀರಿ ಅನ್ನೋದನ್ನು ಸ್ವಲ್ಪ ಯೋಚಿಸಬೇಕು… ಅಂತಾರಾಷ್ಟ್ರೀಯ ಮಟ್ಟದಲ್ಲಿ ರನ್ ಗಳಿಸುವುದು , ಶತಕ ಸಿಡಿಸೋದು ಮಾತಿನಲ್ಲಿ ಹೇಳಿದ್ದಷ್ಟು ಸುಲಭವಲ್ಲ. ಅಲ್ಲದೆ ಸ್ವಾರ್ಥಿ ಅಂತಿರಲ್ಲ… ಈ ಮನು ಕುಲದಲ್ಲಿ ಸ್ವಾರ್ಥ ಇಲ್ಲದ ವ್ಯಕ್ತಿ ಯಾರು ಇದ್ದಾರೆ. ಪ್ರತಿಯೊಬ್ಬರು ಸ್ವಾರ್ಥಕ್ಕಾಗಿಯೇ ಬದುಕು ಸಾಗಿಸೋದು… ಅದು ರಾಮನೂ ಇರಬಹುದು.. ಕೃಷ್ಣನೂ ಇರಬಹುದು.. ಬುದ್ಧನೂ ಇರಬಹುದು.. ಪ್ರತಿಯೊಬ್ಬರಲ್ಲೂ ಸ್ವಾರ್ಥ ಇದ್ದೇ ಇರುತ್ತೆ. ದೇವರಲ್ಲಿಯೇ ಸ್ವಾರ್ಥ ಇರುವಾಗ ಮನುಷ್ಯರಲ್ಲಿ ಇರುವುದರಲ್ಲಿ ತಪ್ಪೇನಿಲ್ಲ.

Related posts

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

August 12, 2026
ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

August 12, 2026
Tags: dehli farmers protestFarmers protestIndian cricketncpSachin TendulkarSharad pawar
ShareTweetSendShare
Join us on:

Related Posts

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

by Shwetha
August 12, 2026
0

ಹೊಸ ದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಬಾಲಿವುಡ್ ನಟಿ ಹಾಗೂ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ...

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

by Shwetha
August 12, 2026
0

ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರಿತ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ, ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಶಾಕ್ ಎದುರಾಗಿದೆ....

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

by Shwetha
August 12, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ 14ನೇ ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 59ನೇ CCH ನ್ಯಾಯಾಲಯ ಆಗಸ್ಟ್ 18ಕ್ಕೆ ಮುಂದೂಡಿದೆ....

ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ ಕೆ ಶಿವಕುಮಾರ್ ಗೂಂಡಾಗಿರಿ ಸರ್ಕಾರ: ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಅಧಿವೇಶನ ನಡೆಯಲು ಬಿಡಲ್ಲ! ಆಡಳಿತ ಪಕ್ಷಕ್ಕೆ ಆರ್ ಅಶೋಕ್ ನೇರ ಎಚ್ಚರಿಕೆ!

ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ ಕೆ ಶಿವಕುಮಾರ್ ಗೂಂಡಾಗಿರಿ ಸರ್ಕಾರ: ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಅಧಿವೇಶನ ನಡೆಯಲು ಬಿಡಲ್ಲ! ಆಡಳಿತ ಪಕ್ಷಕ್ಕೆ ಆರ್ ಅಶೋಕ್ ನೇರ ಎಚ್ಚರಿಕೆ!

by Shwetha
August 12, 2026
0

ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣ ಲೂಟಿ ಮಾಡಿದ ಬಿ ನಾಗೇಂದ್ರ ರಾಜೀನಾಮೆಗೆ ಪಟ್ಟು. ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಕೆ!...

ಕರ್ನಾಟಕಕ್ಕೆ ಮತ್ತೆ ಶಾಕ್; ತಮಿಳುನಾಡಿಗೆ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ

ಕರ್ನಾಟಕಕ್ಕೆ ಮತ್ತೆ ಶಾಕ್; ತಮಿಳುನಾಡಿಗೆ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ

by Shwetha
August 12, 2026
0

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ನೀರು ಹರಿಸುವ ಕುರಿತು ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ, ಕರ್ನಾಟಕಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram