ಗರ್ಭಿಣಿ ಪತ್ನಿಯನ್ನು ಕೊಂದ ಪತಿ
ನೆಲಮಂಗಲ: ಪತಿ ಮೂರು ತಿಂಗಳ ಗರ್ಭಿಣಿಯ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್ಪೇಟೆಯ ಅನ್ನಪೂರ್ಣೆಶ್ವರಿ ಬಡಾವಣೆಯಲ್ಲಿ ನಡೆದಿದೆ.
ವನಿತಾ (25) ಮೃತ ದುರ್ದೈವಿ , ಪತಿ ಶಶಿಧರ್ ಕೊಲೆ ಮಾಡಿದ ಆರೋಪಿಯಾಗಿದ್ದು, ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ನಡೆದಿದ್ದೇನು?: ನಿವೃತ್ತ ಪೊಲೀಸ್ ಅಧಿಕಾರಿಯ ಮಗನಾದ ಶಶಿಧರ್ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತುಮಾಕೂರು ಜಿಲ್ಲೆ ನಂದಿಹಳ್ಳಿಯ ವನಿತಾ ಕುಟುಂಬಸ್ಥರಿಗೆ ನಂಬಿಸಿದ್ದಾನೆ. ನಂತರ ಒಂದು ವರ್ಷದ ಹಿಂದೆಷ್ಟೇ ವನಿತಾ ಮತ್ತು ಶಶಿಧರ್ ಮದುವೆ ಮದುವೆಯಾಗಿದ್ದರು.
ಆದರೆ, ಮದುವೆಯಾದ ದಿನದಿಂದ ಒಂದು ದಿನವೂ ಆತ ಕೆಲಸಕ್ಕೆ ಹೋಗಿರಲಿಲ್ಲ. ವಿವಿಧ ಚಟಗಳನ್ನು ಮೈಗೂಡಿಸಿಕೊಂಡಿದ್ದ. ಹೀಗಾಗಿ ಪತಿ-ಪತ್ನಿ ನಡುವೆ ಹೊಂದಾಣಿಕೆ ಇರಲಿಲ್ಲ. ಇದರಿಂದ ವನಿತಾ ತವರು ಮನೆಗೆ ಬಂದಿದ್ದಳು. ಕೆಲವು ದಿನಗಳ ಹಿಂದೆ ಶಶಿಧರ್ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವುದ್ದಾಗಿ ಹೇಳಿ ಮುಚ್ಚಳಿಕೆ ಬರೆದುಕೊಟ್ಟು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದ.
ಸದ್ಯ ವನಿತಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಆದರೆ, ಇದೀಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಆರೋಪಿ ಶಶಿಧರ್, ಈತನ ತಾಯಿ ಅನ್ನಪೂರ್ಣಮ್ಮ, ತಂದೆ ಪುಟ್ಟರುದ್ರಯ್ಯ, ಸಹೋದರಿ ಸೌಮ್ಯ ಆಕೆಯ ಗಂಡ ವಸಂತ್ ಸೇರಿ 5 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.