ರಾಯ್ಪುರ್: ವ್ಯಕ್ತಿಯೊಬ್ಬ ಮನೆ ಕೆಲಸದವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗ ಪತ್ನಿಯ ಕೈಗೆ ಸಿಕ್ಕಿಬಿದ್ದಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಆರೋಪಿ ಕಿಶನ್ ರಾಮ್ ಮನೆ ಕೆಲಸದವಳಾದ ಪೂನಂ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಪತ್ನಿ ಈ ಕುರಿತು ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ.
ಏನಿದು ಪ್ರಕರಣ?
ಛತ್ತೀಸ್ ಗಢದಲ್ಲಿ ಕಿಶನ್ ರಾಮ್ ತನ್ನ ಪತ್ನಿ ಕುಸುಮ ಜೊತೆ ವಾಸಿಸುತ್ತಿದ್ದನು. ಕೆಲ ವರ್ಷಗಳಿಂದ ಪೂನಂ ಎಂಬ ಮಹಿಳೆ ಕಿಶನ್ ರಾಮ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು.
ಈ ವೇಳೆ ಕಿಶನ್, ಪೂನಂಗೆ ಆರ್ಥಿಕವಾಗಿ ಸಹಾಯ ಮಾಡಿ ಆಕೆಗೆ ಹತ್ತಿರವಾಗಿದ್ದನು. ಕೊನೆಗೆ ಇಬ್ಬರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಪತ್ನಿ ಕುಸುಮ ಮನೆಯಲ್ಲಿ ಇಲ್ಲದಿದ್ದಾಗ ಇಬ್ಬರು ಬೆಡ್ ರೂಮಿನಲ್ಲಿ ಸೆಕ್ಸ್ ಮಾಡುತ್ತಿದ್ದರಂತೆ.
ಒಂದು ದಿನ ಕುಸುಮ ಮನೆಯಿಂದ ಹೊರಹೋಗಿ ಬಂದಾಗ ಕಿಶನ್, ಪೂನಂ ಬೆಡ್ ರೂಂನಲ್ಲಿರುವುದನ್ನು ಗಮನಿಸಿದ್ದಾಳೆ. ಅಲ್ಲಿ ಅವರಿಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆದರೆ ಕುಟುಂಬದ ಗೌರವ ಹಾಳಾಗುತ್ತದೆ ಎಂದು ಈ ವಿಚಾರವನ್ನು ಪತ್ನಿ ಕುಸುಮ ಯಾರಿಗೂ ಹೇಳಿರಲಿಲ್ಲ. ಇದನ್ನು ತಿಳಿದ ರಾಮ್, ಕುಸುಮ ಮನೆಯಲ್ಲಿದ್ದಾಗಲೇ ಪೂನಂ ಜೊತೆ ಸಂಬಂಧ ಹೊಂದುತ್ತಿದ್ದನು. ಅಲ್ಲದೆ ಕುಸುಮಾಗೆ ಹಿಂಸೆ ಕೊಡಲು ಶುರುಮಾಡಿದ್ದನು. ಇದರಿಂದ ಕುಸುಮ ಖಿನ್ನತೆಗೆ ಒಳಗಾಗಿ ಕೊನೆಗೆ ತನ್ನ ಪತಿಯ ಅನೈತಿಕ ಸಂಬಂಧವನ್ನು ಬಹಿರಂಗಪಡಿಸಲು ನಿರ್ಧರಿಸಿದ್ದಳು.
ಅದರಂತೆಯೇ ಶನಿವಾರ ಪೂನಂ ಮತ್ತು ಪತಿ ರಾಮ್ ರೂಮಿನಲ್ಲಿದ್ದಾಗ ಕುಸುಮ ಕಿಟಕಿಯಿಂದ ಅದನ್ನು ವಿಡಿಯೋ ಮಾಡಿಕೊಂಡು, ಫೋಟೋಗಳನ್ನು ತೆಗೆದುಕೊಂಡಿದ್ದಾಳೆ. ನಂತರ ಫೋಟೋ ಮತ್ತು ವಿಡಿಯೋ ಸಾಕ್ಷಿ ಸಮೇತ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.








