ಗಾಂಧಿನಗರ | ಪತ್ನಿಯನ್ನು ಕೊಂದು ಹೆಣದೊಂದಿಗೆ ರಾತ್ರಿ ಕಳೆದ ಪತಿ
ಗಾಂಧಿನಗರ : ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಶವದ ಜೊತೆಯೇ ರಾತ್ರಿಪೂರ ಮಲಗಿ ಎದ್ದು ಹೋದ ವಿಲಕ್ಷಣ ಘಟನೆ ಗುಜರಾತ್ ನ ಗಾಂಧಿನಗರದಲ್ಲಿ ನಡೆದಿದೆ.
ಆರೋಪಿಯನ್ನು ಲಿಖರಾಮ್ ಅಲಿಯಾಸ್ ಲಕ್ಷ್ಮಣ್ ಕೇಶರಾಮ್ ಚೌಧರಿ ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾನೆ.
ಈತ ಕಳೆದ ಕೆಲ ವರ್ಷಗಳ ಹಿಂದೆ ಏಜೆಂಟ್ ಮೂಲಕ ವಧುವನ್ನ ಹುಡುಕಿ ಸುಮಾರು ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆಯಾಗಿದ್ದನು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ಮಧ್ಯೆ ಕ್ರಮೇಣ ಜಗಳಗಳು ಆರಂಭವಾಗಿವೆ.
ಇದರಿಂದ ಬೇಸತ್ತ ಲಕ್ಷ್ಮಣ್ ಡಿಸೆಂಬರ್ 4 ರಂದು ತನ್ನ ಪತ್ನಿಯನ್ನು ಕೊಲೆ ಮಾಡಿಕೊಂಡಿದ್ದಾನೆ. ಅಲ್ಲದೆ ಪತ್ನಿಯ ಶವವನ್ನು ಗೋಣಿಚೀಲವೊಂದರಲ್ಲಿ ಹಾಕಿ ಅದರ ಜೊತೆಯೇ ರಾತ್ರಿ ಕಳೆದಿದ್ದಾನೆ.
ಇನ್ನು ಈ ಲಕ್ಷ್ಮಣ್ ತರಕಾರಿ ವ್ಯಾಪಾರಿ ಆಗಿದ್ದನಂತೆ. ಪತ್ನಿಯನ್ನ ಕೊಲೆ ಮಾಡಿ ಮರುದಿನವೂ ಕೂಡ ಈತ ವ್ಯಾಪಾರಕ್ಕೆ ತೆರಳಿದ್ದು, ಆ ಬಳಿಕ ಪರಾರಿಯಾಗಿದ್ದಾನೆ. ಇತ್ತ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









