ಕೊಟ್ಟಿಗೆಗೆ ಬೆಂಕಿ | ಗೋವನ್ನ ರಕ್ಷಿಸಿ ಯುವಕ ಸಾವು
ನೆಲಮಂಗಲ : ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವತೇಕೆರೆ ಗ್ರಾಮದಲ್ಲಿ ನಡೆದಿದೆ.
ಲೋಕೇಶ್ ಮೃತಪಟ್ಟ ಯುವಕನಾಗಿದ್ದು, ಕೊಟ್ಟಿಗೆಗೆ ಬೆಂಕಿದ್ದಾಗ ಗೋವುಗಳನ್ನ ರಕ್ಷಿಸಲು ಹೋಗಿ ಜೀವ ಕಳೆದುಕೊಂಡಿದ್ದಾರೆ.
ಮನೆಯ ನೀರು ಕಾಯಿಸುವ ಒಲೆಯಿಂದ ಇಡೀ ಕೊಟ್ಟಿಗೆ ಮನೆಗೆ ಬೆಂಕಿ ವ್ಯಾಪಿಸಿದೆ.
ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಲೋಕೇಶ್ ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಎಳೆದು ಹೊರ ತಂದಿದ್ದಾರೆ. ಈ ವೇಳೆ ನಾಲ್ಕು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.
ಗೋವುಗಳನ್ನು ಹೊರ ತರುವ ಸಂದರ್ಭದಲ್ಲಿ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್ ಮೃತಪಟ್ಟಿದ್ದಾರೆ.