Hyderabad : 16 ವರ್ಷದ ವಿದ್ಯಾರ್ಥಿ ಜೊತೆ ಓಡಿಹೋದ 27 ವರ್ಷದ ಶಿಕ್ಷಕಿ….
27 ವರ್ಷದ ಅವಿವಾಹಿತ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯಾಗಿದ್ದ 16 ವರ್ಷದ ಬಾಲಕನೊಂದಿಗೆ ಓಡಿ ಹೋಗಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಎರಡೂ ಕುಟಂಬದವರಿಂದ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಗಚಿಬೋಲಿ ಠಾಣೆಯಲ್ಲಿ ದೂರು ಸ್ವೀಕರಿಸಿದ ನಂತರ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿದ್ದಾರೆ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾತನಾಡಿ ಶಿಕ್ಷಕಿಯನ್ನ ಶನಿವಾರ ವಿಚಾರಣೆ ನಡೆಸಿದಾಗ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿಯನ್ನ ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಿಕ್ಷಕಿಯ ಕುಟುಂಬ ತನಗಾಗಿ ವರನನ್ನ ಹಡುಕುತ್ತಿರುವುದರಿಂದ ಮತ್ತು ಬೇರೊಬ್ಬರನ್ನ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರಿಂದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿದ್ದಾಗಿ ತಿಳಸಿದ್ದಾರೆ.
ಬಾಲಕ ಅಪ್ರಾಪ್ತ ವಯಸ್ಕನಾಗಿದ್ದು ಅವನೊಂದಿಗೆ ಮುಂದುವರೆದರೆ ಅಪಹರಣದ ಆರೋಪವನ್ನ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಶಿಕ್ಷಕಿಗೆ ವಿವರಿಸಿ ಕೌನ್ಸೆಲಿಂಗ್ ನಡೆಸಿದ ನಂತರ ಮಹಿಳೆಯನ್ನ ಹೋಗಲು ಬಿಟ್ಟಿದ್ದಾರೆ.
ಫೆಬ್ರವರಿ 16 ರಂದು ಮನೆಯಿಂದ ಹೊರಟಿದ್ದ ಶಿಕ್ಷಕಿ ಶಾಲೆ ಮುಗಿದ ನಂತರವೂ ಮನೆಗೆ ಬರದಿದ್ದಾಗ ಫೆ 17 ರಂದು ದೂರು ದಾಖಲಿಸಲಾಗಿತ್ತು. ಪೊಲೀಸರು ಅವರನ್ನ ಪತ್ತೆ ಹಚ್ಚುವಾಗ ಅದೇ ಶಾಲೆಯ 16 ವರ್ಷದ 10 ನೇ ತರಗತಿ ವಿದ್ಯಾರ್ಥಿಯೂ ನಾಪತ್ತಯಾಗಿದ್ದ. ಮಹಿಳಾ ಶಿಕ್ಷಕಿ ತನ್ನೊಂದಿಗೆ ಕರೆದೊಯ್ದಿರ ಬಹುದು ಎಂದು ಹುಡುಗನ ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದರು.
ಪೊಲೀಸರು ಶೋಧ ಕಾರ್ಯ ಕೈಗೊಂಡ ನಂತರ ಕೆಲವು ದಿನಗಳ ಕಾಲ ಹೈದ್ರಾಬಾದ್ ಮತ್ತು ಬೆಂಗಳೂರಿನ ವಿವಿಧ ಹೋಟೆಲ್ ಗಳಲ್ಲಿ ಉಳಿದುಕೊಂಡಿದ್ದು ಆಗಾಗ ಸ್ಥಳ ಬದಲಾಯಿಸುತ್ತಿರುವುದು ಪತ್ತೆ ಹಚ್ಚಿದ್ದಾರೆ. ಕೊನೆಗೆ ಫೆಬ್ರವರಿ 27 ರಂದು ಬೆಂಗಳೂರಿನ ವಸತಿ ಗೃಹವೊಂದರಲ್ಲಿ ಪ್ರೇಮಿಗಳನ್ನ ಪತ್ತೆಹಚ್ಚಿದ್ದಾರೆ.
Hyderabad : A 27 -year -old teacher who fled with a 16 -year -old student….