ಹೈದರಾಬಾದ್: ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಪಂಜಾಬ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್ ಅಬ್ಬರದಿಂದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) 4 ವಿಕೆಟ್ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 214 ಬೃಹತ್ ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 215 ರನ್ ಗುರಿ ಬೆನ್ನತ್ತಿದ ಹೈದರಾಬಾದ್ 19.1 ಓವರ್ಗೆ 6 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪಂಜಾಬ್ ಪರ ಅಥರ್ವ ತೈಡೆ ಹಾಗೂ ಪ್ರಭ್ಸಿಮ್ರನ್ ಸಿಂಗ್ ಉತ್ತಮ ಆಟವಾಡಿದರು. ಮೊದಲ ಜೋಡಿ ಮೊದಲ ವಿಕೆಟ್ಗೆ 9.1 ಓವರ್ಗಳಲ್ಲಿ 97 ರನ್ ಪೇರಿಸಿದ್ದರು. ಅಥರ್ವ 46 ರನ್, ಪ್ರಭ್ಸಿಮ್ರನ್ 71, ರಿಲಿ ರಾಸ್ಸೋ 49,ನಾಯಕ ಜಿತೇಶ್ ಶರ್ಮಾ 32ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಹೈದರಾಬಾದ್ ಪರ ಟ್ರಾವಿಸ್ ಹೆಡ್ ಮೊದಲ ಬೌಲ್ ಗೆ ಒಟ್ ಆದರು. ಅಭಿಷೇಕ್ ಶರ್ಮಾ 66 ರನ್, ರಾಹುಲ್ ತ್ರಿಪಾಠಿ 33, ಜಿತೇಶ್ ಶರ್ಮಾ 32 ರನ್ ಸಿಡಿಸಿ ಗೆಲುವಿನಲ್ಲಿ ಪಾತ್ರವಹಿಸಿದರು. ಪರಿಣಾಮವಾಗಿ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿಯಿತು.