Hydrabad : ಮಧ್ಯರಾತ್ರಿ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಮಗಳ ಹತ್ಯೆಗೈದ ತಂದೆ
ಮಧ್ಯರಾತ್ರಿ ಫೋನ್ ನಲ್ಲಿ ಮಾತನಾಡಿದ ಕಾರಣಕ್ಕೆ ತಂದೆಯೊಬ್ಬ ಸ್ವಂತ ಮಗಳನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆಯು ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ ಬಕರಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಯಾಸ್ಮಿನ್ ಉನಿಸ್ಸಾ ಎಂದು ಗುರುತಿಸಲಾಗಿದೆ. ಈಕೆಗೆ 17 ವರ್ಷ ವಯಸ್ಸು..
ಆಕೆಯ ತಂದೆ ಮೊಹಮ್ಮದ್ ತಾಫಿಕ್ ಆಟೋ ಚಾಲಕನಾಗಿದ್ದ. ಈತ ಮಧ್ಯರಾತ್ರಿ ತನ್ನ ಮಗಳು ಯಾಸ್ಮೀನ್ ಫೋನ್ ನಲ್ಲಿ ಮಾತನಾಡುವುದನ್ನು ಗಮನಿಸಿದ್ದಾನೆ.
ಇದರಿಂದ ಕೋಪಗೊಂಡ ಮೊಹಮ್ಮದ್ ತನ್ನ ಮಗಳ ಫೋನ್ ಅನ್ನು ಕಸಿದು ಆಕೆಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಆಕೆಯ ಹಿರಿಯ ಸಹೋದರಿ ನೌಸೀನು ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಆದರೆ ಮೊಹಮ್ಮದ್ ಆಕೆಯನ್ನು ಪಕ್ಕಕ್ಕೆ ತಳ್ಳಿ, ಯಾಸ್ಮೀನ್ ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿ ನೌಸೀನುನಿಸ್ಸಾ ಪೊಲೀಸರಿಗೆ ಕರೆ ಮಾಡಿ ವಿವರಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೌಫಿಕ್ ನನ್ನ ಬಂಧಿಸಿದ್ಧಾರೆ..
Hydrabad : Father kills his own daughter : Father kills his own daughter after she was in call in midnight