ನನಗೂ ಮಂತ್ರಿಸ್ಥಾನ ಸಿಗುವ ನಿರೀಕ್ಷೆ ಇದೆ : ತಿಪ್ಪಾರೆಡ್ಡಿ
ಚಿತ್ರದುರ್ಗ : ನಮ್ಮ ಜಿಲ್ಲೆಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆ ಇದೆ. ರಾಜ್ಯ ಮತ್ತು ಕೇಂದ್ರದ ನಾಯಕರು ಸೂಕ್ತ ತೀರ್ಮಾನ ಮಾಡುತ್ತಾರೆ. ನನಗೂ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಜಿ ಎಸ್ ತಿಪ್ಪಾರೆಡ್ಡಿ ಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ನಮ್ಮ ಬೊಮ್ಮಾಯಿ ಹೊಸ ಸಿಎಂ ಆಗಿದ್ದಾರೆ. ಅವರ ತಂದೆ ಜನತಾ ಪರಿವಾರದಲ್ಲಿ ಪಕ್ಷ ಕಟ್ಟಿ, ರಾಜ್ಯ & ಕೇಂದ್ರದ ಮಂತ್ರಿ ಆಗಿದ್ದವರು. ರಾಜ್ಯವನ್ನ ಸುತ್ತಿದ್ದಾರೆ, ಜಿಲ್ಲೆಯ ಸಮಸ್ಯೆಗಳ ಕುರಿತು ಗೊತ್ತಿದೆ.
ನೀರಾವರಿ ಸಚಿವರಾಗಿ, ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ತುಂಬಾಆ ತಾಳ್ಮೆಯಿಂದ ಇರುವಂತ ನಾಯಕ ಬೊಮ್ಮಾಯಿ. ಮಾಜಿ ಸಿಎಂ ಯಡಿಯೂರಪ್ಪ ಅವರು ಆಶಿರ್ವಾದ ಮಾಡಿದ್ದಾರೆ. ರಾಜ್ಯದ ಬೆಳವಣಿಗೆ, ಪಕ್ಷ ಕಟ್ಟಲು ನಾವು ಜೊತೆಗೆ ಇರುತ್ತೇವೆ ಎಂದು ನೂತನ ಸಿಎಂ ಬಗ್ಗೆ ಮಾತನಾಡಿದ್ರು.
ಇನ್ನು ನಾನು ಸಚಿವನಾಗುವುದು ಸಿಎಂ ಮತ್ತು ಹೈಕಮಾಂಡ್ ಚರ್ಚೆ ಮಾಡ್ಬೇಕಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ, ಕೇಂದ್ರ ಮಾದರಿಯಲ್ಲಿ ಕ್ಯಾಬಿನೆಟ್ ನಲ್ಲಿ ಅವಕಾಶ ನೀಡಿದ್ದಾರೆ. ಕರ್ನಾಟಕದಲ್ಲೂ ಅದೇ ಮಾದರಿಯ ಕ್ಯಾಬಿನೆಟ್ ಗೆ ಅವಕಾಶ ಮಾಡುವ ಭರವಸೆ ಇದೆ ಎಂದು ಹೇಳಿದರು.