ನಾನು ಎಲ್ಲರಂತೆ ಸಾಮಾನ್ಯ.. ನನಗೆ ಸೆಕ್ಯೂರಿಟಿ ಬೇಡ : ಪಂಜಾಬ್ ಸಿಎಂ Punjab CM saaksha tv
ಚಂಡೀಗಢ : ನಾನು ಎಲ್ಲರಂತೆ ಸಾಮಾನ್ಯ ಮನುಷ್ಯ.. ನನಗೆ ಸೆಕ್ಯೂರಿಟಿ ಬೇಡ ಎಂದು ಪಂಜಾಬ್ ನ ನೂತನ ಸಿಎಂ ಚರಣ್ ಸಿಂಗ್ ಛನ್ನಿ ಅವರು ಭದ್ರತಾ ವ್ಯವಸ್ಥೆಯನ್ನು ನಿರಾಕರಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ನಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದರು.
ಬಳಿಕ ಕಾಂಗ್ರೆಸ್ ಹೈಕಮಾಂಡ್ ಚರಣ್ ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೂತನ ಸಿಎಂಯನ್ನಾಗಿ ಆಯ್ಕೆ ಮಾಡಿದರು.
ಇನ್ನು ನೂತನವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚರಣ್ ಜಿತ್ ಸಿಂಗ್, ಭದ್ರತಾ ವ್ಯವಸ್ಥೆಯನ್ನು ನಿರಾಕರಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು, ನಾನೊಬ್ಬ ನಿಮ್ಮಂತೆ ಸಾಮಾನ್ಯ ಮನುಷ್ಯ. ಹಾಗಾಗಿ ನನಗೆ 1000 ಭದ್ರತಾ ಸಿಬ್ಬಂದಿ ಮತ್ತು 300 ಕಾರ್ ಗಳ ರಕ್ಷಣಾ ವ್ಯವಸ್ಥೆ ಬೇಡ ಎಂದಿದ್ದಾರೆ.









