ಇನ್ಮುಂದೆ ನಾನು ಸೂಪರ್ ಸಿಎಂ ಅಲ್ಲ : ವಿಜಯೇಂದ್ರ
ಬೆಂಗಳೂರು : ಇನ್ಮುಂದೆ ನಾನು ಸೂಪರ್ ಸಿಎಂ ಅಲ್ಲ. ಸೂಪರ್ ಸಿಎಂ ಟ್ಯಾಗ್ ನಿಂದ ಹೊರಗೆ ಬಂದಿರೋದಕ್ಕೆ ಸಂತೋಷವಾಗಿದ್ದೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಬಸವರಾಜ್ ಬೊಮ್ಮಾಯಿ ಅವರು ಗಾಜಿನ ಮನೆಯಲ್ಲಿ ಪ್ರಮಾನವಚನ ಸ್ವೀಕರಿಸಿದರು.
ಈ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸಿಎಂ ಬದಲಾಗಿದ್ದರಿಂದ ನಾನು ಸೂಪರ್ ಸಿಎಂ ಟ್ಯಾಗ್ ನಿಂದ ಹೊರಗೆ ಬಂದಿರೋದಕ್ಕೆ ಸಂತೋಷವಾಗಿದ್ದೇನೆ.
ಮುಂದೆ ಪಕ್ಷದಲ್ಲಿ ಅಥವಾ ಸರ್ಕಾರದೊಳಗೆ ಕೆಲಸ ಮಾಡಬೇಕು ಎಂಬುದನ್ನ ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ ವಲಸಿಗರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, 17 ಜನರು ಪಕ್ಷ ಮತ್ತು ಯಡಿಯೂರಪ್ಪನವರನ್ನು ನಂಬಿಕೊಂಡು ಬಂದವರು.
ಎಲ್ಲರನ್ನು ಪಕ್ಷ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತೆ ಅನ್ನೋ ವಿಶ್ವಾಸವಿದೆ. ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದು ಕೇಂದ್ರದ ನಾಯಕತ್ವ.
ಹಾಗಾಗಿ ಎಲ್ಲರ ವಿಶ್ವಾಸ ತೆಗೆದುಕೊಂಡು ಸರ್ವಾನುಮತದಿಂದ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.