ಬೆಂಗಳೂರು : ಇಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಂಗಳವಾರದ ಗಲಭೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ನಾನು ಎಲ್ಲರ ಜೊತೆಯೂ ಸಮಾನವಾಗಿ ಇದ್ದೇನೆ. ಅವರು ನನ್ನ ಮೇಲೆ ದ್ವೇಷ ಸಾಧಿಸುವ ಅವಶ್ಯಕತೆ ಇಲ್ಲ. ಆದರೂ ನನ್ನ ಮನೆಯನ್ನು ಹಾಳು ಮಾಡಿದ್ದಾರೆ. ಒಂದು ವೇಳೆ ಮನೆಯಲ್ಲಿ ಮಕ್ಕಳಿದಿದ್ದರೆ ಯಾರು ಹೊಣೆಯಾಗುತ್ತಿದ್ದರು. ಅದಕ್ಕೆ ನಾನು ಪೊಲೀಸರ ಭದ್ರತೆಗೆ ಕೇಳಿಕೊಂಡಿದ್ದೇನೆ. ಜೊತೆಗೆ ರಾಜ್ಯ ಸರ್ಕಾರದ ಬಳಿಯೂ ರಕ್ಷಣಗೆಗಾಗಿ ಮನೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಇನ್ನು ಮನೆ ಸಂಪೂರ್ಣವಾಗಿ ನಾಶವಾಗಿದೆ. ನಮ್ಮ ಮನೆಯಲ್ಲಿ ಹಾಳು ಮಾಡಿದ್ದರಲ್ಲ ಎಂಬ ದುಃಖ ಇದೆ. ಯಾಕೆಂದರೆ ನಾನು ಹುಟ್ಟಿ ಬೆಳೆದಂತಹ ಮನೆ ಅದು ಎಂದ ಅಖಂಡ ಶ್ರೀನಿವಾಸ ಮೂರ್ತಿ, ನಾನು ಆ ಪಕ್ಷ, ಈ ಪಕ್ಷ ಎಂದು ಭೇದಭಾವ ಮಾಡಿಲ್ಲ. ಎಲ್ಲರ ಜೊತೆಗೆ ಒಟ್ಟಾಗಿ ಕೆಲಸ ಮಾಡಿದ್ದೇನೆ. ಪ್ರತಿದಿನ ನನ್ನ ಕ್ಷೇತ್ರ ಬಿಟ್ಟು ಹೊರಗೆ ಹೋಗಿಲ್ಲ. ಅಲ್ಲದೇ ನಾವು ಯಾರ ಮೇಲೂ ಧ್ವೇಷಕ್ಕೆ ಹೋಗಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇನೆ. ಮುಸ್ಲಮಾನರು, ಹಿಂದೂ, ಕ್ರಿಶ್ಚನ ಎಲ್ಲರೂ ಒಟ್ಟಾಗಿ ಇದ್ದೀವಿ. ನಮ್ಮ ಕ್ಷೇತ್ರದಲ್ಲಿ 24 ವರ್ಷದಿಂದ ಯಾವ ಘಟನೆಗಳು ಆಗಿಲ್ಲ. ಮುಂದಕ್ಕೂ ಆಗಬಾರದು ಎಂದು ಹೇಳಿದರು.








