ನವದೆಹಲಿ : ನಾನು ದೆಹಲಿಗೆ ಬಂದು ಪಂಚತಾರಾ ಹೊಟೆಲ್ ನಲ್ಲಿ ಮಜಾ ಮಾಡ್ತಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸೈಕಲ್ ಮೇಲೆ ಕೊರೊನಾ ಸೋಂಕಿತನ ಶವ ಸಾಗಿಸಿದ ಪ್ರಕರಣದ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಇರಬೇಕು ಎಂದು ಸಿಎಂ ಸೂಚಿಸಿದ್ದಾರೆ. ನಾನು ದೆಹಲಿಗೆ ಬಂದು ಪಂಚತಾರಾ ಹೊಟೆಲ್ ನಲ್ಲಿ ಮಜಾ ಮಾಡುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಸೈಕಲ್ ಮೇಲೆ ಶವ ತೆಗೊಂಡೋಗಿದ್ದು ದುರ್ದೈವ ಹೀಗಾಗ ಬಾರದಿತ್ತು ಎಂದರು.
ಇದೇ ವೇಳೆ ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿದ ಸಚಿವರು, ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ವರಿಷ್ಠರ ಮುಂದೆ ಡಿಸಿಎಂ ಸ್ಥಾನವನ್ನೂ ಕೇಳಿಲ್ಲ. ಸಿ.ಪಿ. ಯೋಗೇಶ್ವರ್ ಅವರನ್ನ ಪರಿಷತ್ ಗೆ ನಾಮನಿರ್ದೇಶನ ಮಾಡಿದ ಹಿನ್ನೆಲೆ ಅವರ ಜೊತೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದೇವೆ. ಬೇರೆ ಯಾವುದೇ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ, ಗೆಳೆಯ ಸಿ.ಪಿ ಯೋಗೇಶ್ವರ್ ಅವರಿಗೆ ಈಗ ನ್ಯಾಯ ಸಿಕ್ಕಿದೆ. ಪಕ್ಷ ಅವಕಾಶ ನೀಡಿದ್ದು, ಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್ ಬಿಟ್ಟದ್ದು ಅತಿಯಾಸೆ ಮಾಡಬಾರದು ಎಂದರು.








