ಪಬ್ಲಿಸಿಟಿಗೋಸ್ಕರ ಮಾಡುವಂತಹ ರಾಜಕಾರಣ ನನಗೆ ಇಷ್ಟ ಇಲ್ಲ : ಸುಮಲತಾ
ಮಂಡ್ಯ : ಪಬ್ಲಿಸಿಟಿಗೋಸ್ಕರ ಮಾಡುವಂತಹ ರಾಜಕಾರಣ ನನಗೆ ಇಷ್ಟ ಇಲ್ಲ ಎಂದು ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.
ಸುಮಲತಾ ಅವರು ಮಂಡ್ಯಕ್ಕೆ ಬರುತ್ತಿಲ್ಲ ಎಂಬ ಆರೋಪದ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಫೇಸ್‍ಬುಕ್ ನಲ್ಲಿ ಸ್ವಾಭಿಮಾನಿ ಎರಡು ವರ್ಷ ಎಂದು ಪೋಸ್ಟ್ ಮಾಡಿದ್ದೆ.
ಸುಮಾರು ಕಾಮೆಂಟ್ಸ್ ಹಾಗೂ ಲೈಕ್ಸ್ ಬಂದಿದೆ. ನಾಲ್ಕು ನೆಗೆಟಿವ್ ಕಾಮೆಂಟ್ ಹೈಲೆಟ್ ಮಾಡಿ ಸುದ್ದಿ ಬಂದಿತ್ತು. ಇವರು ಮಂಡ್ಯ ಜಿಲ್ಲೆಗೆ ಬರ್ತಿಲ್ಲ ಎಂದು ಜೆಡಿಎಸ್ ನಾಯಕರು ಆರೋಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅಲ್ಲದೆ ಇದು ರಾಜಕೀಯ ಕುತಂತ್ರ ಎಂದು ಕಿಡಿಕಾರಿದರು.
ಇದೇ ವೇಳೆ ಎಂಎಲ್ ಎ ಗಳನ್ನು ತರಾಟೆಗೆ ತೆಗೆದುಕೊಂಡ ಸುಮಲತಾ, ನೀವು 7 ಜನ ಇದ್ದೀರಲ್ಲಾ ಅಚ್ಚುಕಟ್ಟಾಗಿ ಎಲ್ಲಾ ಕಡೆ ಹೋಗಿ ಕೆಲಸ ಮಾಡಿದ್ರೇ ಸಂಸದರನ್ನ ಜನರು ಕೇಳೋದೆ ಇಲ್ಲ.
ಎಂಎಲ್ ಎ, ಜೆಡ್ ಪಿ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗೂ ಎಂಪಿ ಬರಬೇಕು ಅಂದ್ರೆ ಜಿಲ್ಲೆಯಲ್ಲಿ ಯಾರು ಕೆಲಸ ಮಾಡುವವರು ಇಲ್ವಾ..? ಎಂದು ಕಾಲೆಳೆದರು.
ಇನ್ನು ಮಂಡ್ಯದಲ್ಲಿ ಸುಮಲತಾ ಬಿಟ್ರೆ ಯಾರು ಕೆಲಸ ಮಾಡುವವರು ಯಾರು ಇಲ್ಲ. ಅದಕ್ಕೆ ಜನ ಕೇಳ್ತಿದ್ದಾರೆ, ಸುಮಲತಾ ಅಂಬರೀಶ್ ಮಂಡ್ಯಕ್ಕೆ ಬರ್ತಿಲ್ಲ ಅಂತಾ. ಇದಕ್ಕೆ ಕಾರಣವನ್ನು ಅವರನ್ನೆ ಕೇಳಬೇಕು ಎಂದರು.