“ಹೂ ಈಸ್ ಈಶ್ವರಪ್ಪ, ಅವ್ರ ಸರ್ಟಿಫಿಕೇಟ್ ಬೇಕಿಲ್ಲ : ಸಿದ್ದರಾಮಯ್ಯ ಟಾಂಗ್
ಹುಬ್ಬಳ್ಳಿ : “ಹೂ ಈಸ್ ಈಶ್ವರಪ್ಪ, ಐ ಡೋಂಟ್ ಕೇರ್ ಈಶ್ವರಪ್ಪ. ನನ್ನ ಸಾಧನೆ ಬಗ್ಗೆ ಅವರಿಗೆ ವರದಿ ಕೊಡುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಸಾಧನೆ ಬಗ್ಗೆ ಅವರಿಗೆ ವರದಿ ಕೊಡುವ ಅಗತ್ಯವಿಲ್ಲ.
ಕುರುಬರಿಗೆ ಎಸ್ ಟಿ ಮೀಸಲು ನೀಡುವ ವಿಚಾರದಲ್ಲಿ, ಕುಲಶಾಸ್ತ ಅಧ್ಯಯನದ ವರದಿ ಬಂದಿಲ್ಲ, ವರದಿ ಬರುವ ಮುನ್ನವೇ ಹೋರಾಟ ಬೇಡ ಅಂದಿದ್ದೆ.
ನಾನು ಸಿಎಂ ಆಗಿದ್ದ ವೇಳೆ ನಾಲ್ಕು ಜಿಲ್ಲೆಗಳಲ್ಲಿ ಕುರುಬರನ್ನು ಎಸ್ ಟಿಗೆ ಸೇರಿಸಬೇಕು ಅಂತಾ ಆದೇಶ ಮಾಡಿದ್ದೆ, ಎಸ್ ಟಿ ಮೀಸಲು ಹೋರಾಟದಲ್ಲಿ ನಾನು ಎಂದಿಗೂ ರಾಜಕೀಯ ಮಾಡಲ್ಲ. ಇದು ಆರ್ ಎಸ್ ಎಸ್ ಪ್ರೇರಿತ ಹೋರಾಟವಾಗಿದೆ.
ಕುರುಬ ಸಮಾಜವನ್ನು ಒಡೆಯುವುದೇ ಇದರ ಉದ್ದೇಶ ಇದೆ ಎಂದು ಆರೋಪಿಸಿದರು.
ಕುರುಬರ ಎಸ್ ಟಿ ಹೋರಾಟದ ಹಿಂದೆ ಆರ್ ಎಸ್ ಎಸ್ ಇದೆ. ಈಶ್ವರಪ್ಪ ಅವರನ್ನು ಇಟ್ಟುಕೊಂಡು ಆರ್ ಎಸ್ ಎಸ್ ಈ ಹೋರಾಟ ಮಾಡಿಸುತ್ತಿದೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈಶ್ವರಪ್ಪ ಅವರಿಂದ ನಾನು ಸರ್ಟಿಫಿಕೇಟ್ ಬೇಕಾಗಿಲ್ಲ. ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಅಂತ ರಾಜ್ಯದ ಜನತೆಗೆ ಗೊತ್ತಿದೆ. ಹೂ ಈಸ್ ಈಶ್ವರಪ್ಪ, ಐ ಡೋಂಟ್ ಕೇರ್ ಈಶ್ವರಪ್ಪ ಎಂದು ಗರಂ ಆದರು.
ಇದೇ ವೇಳೆ ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ಸ್ಪರ್ಧಿಸಲ್ಲ ಎಂಬ ವಿಚಾರವಾಗಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ನೆಲೆ ಇಲ್ಲ. ಹೀಗಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ನೇರವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel