ಮದುವೆಗೂ ಮುನ್ನ ಬುರ್ಖಾ ಧರಿಸುತ್ತಿದ್ದಳಂತೆ ದೀಪಿಕಾ ಪಡುಕೋಣೆ
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನ.14 ರಂದು ತಮ್ಮ ಮೂರನೆ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡರು ಈ ವೇಳೆ ಅಭಿಮಾನಿಗಳಿಗೆ ಅಚ್ಚರಿಯ ವಿಷಯವೊಂದನ್ನ ಹಂಚಿಕೊಂಡಿದ್ದಾರೆ.
ದೀಪಿಕಾ ಮತ್ತು ರಣ್ವೀರ್ ವಿವಾಹ ನಿರ್ಧಾರವಾದಾಗಿನಿಂದ ಮೀಡಿಯಾ ಕಣ್ಣುಗಳು ಇವರ ಸುತ್ತಲೇ ಗಿರಕಿಹೊಡೆಯುತ್ತಿದ್ದವು. ಇದರಿಂದ ತಪ್ಪಿಸಿಕೊಳ್ಳಲು ಆರು ತಿಂಗಳ ಕಾಲ ನಾನು ಬುರ್ಖಾ ಧರಿಸುತ್ತಿದ್ದೆ ಎಂದು ದೀಪಿಕಾ ಪಡುಕೋಣೆ ತಿಳಿಸದ್ದಾರೆ.
ಮದುವೆ ದಿನದ ಡ್ರೆಸ್ ಹೇಗಿರಬೇಕು ಎಂದು ನಿರ್ಧರಿಸಲು ನಾನು ಮತ್ತು ರಣ್ವೀರ್ ಬಹಳ ತಲೆಕೆಡಿಸಿಕೊಂಡೆವು ಅದಕ್ಕಾಗಿ ಹಲವಾರು ಅಂಗಡಿಗಳನ್ನ ಸುತ್ತಬೇಕಿತ್ತು… ಈ ಸಮಯದಲ್ಲಿ ಮಾಧ್ಯಮಗಳ ಕಣ್ಣು ನಮ್ಮ ಮೇಲೆಯೇ ನೆಟ್ಟಿರುತ್ತಿದ್ದವು ಹಾಗಾಗಿ ನಮ್ಮ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಅವರ ಸಲಹೆಯಂತೆ ನಾನು ಬುರ್ಖ ಧರಿಸುತ್ತಿದ್ದೆ ಎಂದು ದೀಪಿಕ ಹೇಳಿದರು.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಕುಟುಂಬ, ಪ್ರೀತಿಪಾತ್ರರು ಮತ್ತು ಆಪ್ತರೊಂದಿಗೆ 2018 ರಲ್ಲಿ, ಇಟಲಿಯಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ನಲ್ಲಿ ಮಾಡಿಕೊಂಡಿದ್ದರು.