ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ : ಪ್ರಕಾಶ್ ರಾಥೋಡ್ ಸ್ಪಷ್ಟನೆ
ಬೆಂಗಳೂರು : ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಸ್ಪಷ್ಣನೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಫೋಟೋಗಳನ್ನ ನೋಡಿದ್ದಾರೆ ಎಂಬ ಸುದ್ದಿ ಹರಿಡಾಡುತ್ತಿತ್ತು.
ಈ ಬಗ್ಗೆ ಸ್ವತಃ ಪ್ರಕಾಶ್ ರಾಥೋಡ್ ಅವರು ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನೂರಾರು ವಾಟ್ಸಾಪ್ ಗ್ರೂಪ್ ಗಳಲ್ಲಿ ನಾನಿದ್ದೇನೆ. ಅವುಗಳಿಂದ ಬರುವ ವಿಡಿಯೋ ಫೋಟೋಗಳಿಂದ ಮೊಬೈಲ್ ಸ್ಟೋರೇಜ್ ಫುಲ್ ಆಗಿತ್ತು.
ಹೀಗಾಗಿ ಫೋಟೋಗಳನ್ನು ಡಿಲೀಟ್ ಮಾಡುತ್ತಿದ್ದೆ. ಅದು ಅಶ್ಲೀಲ ವಿಡಿಯೋನಾ..? ಅನ್ನೋದೂ ನನಗೆ ಗೊತ್ತಿಲ್ಲ..
ನಾನು ಯಾವುದನ್ನೂ ನೋಡದೆ ಬಂದಿರುವ ಮೆಸೇಜ್ ಮತ್ತು ವಿಡಿಯೋ ಡಿಲೀಟ್ ಮಾಡ್ತಿದ್ದೆ.
ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ, ನೋಡುವ ಅವಶ್ಯಕತೆಯೂ ನನಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel