ನಟ ದರ್ಶನ್ ಅವರು ತಮ್ಮ ಪಿಸ್ತೂಲ್ ಲೈಸೆನ್ಸ್ ರದ್ದುಗೊಳಿಸುವುದಾಗಿ ಪೊಲೀಸರು ನೀಡಿದ್ದ ನೋಟಿಸ್‌ಗೆ ಉತ್ತರ ನೀಡಿದ್ದರೂ ಅವರ ಪಿಸ್ತೂಲ್ ಲೈಸೆನ್ಸ್ ರದ್ದುಗೊಳಿಸಲಾಗಿತ್ತು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿರುತ್ತಾರೆ,ಪ್ರಸ್ತುತ ಪಿಸ್ತೂಲ್ ಲೈಸೆನ್ಸ್ ರದ್ದು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ಗೆ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ. ದರ್ಶನ್ ಪ್ರಮುಖ ಆರೋಪಿಯಾಗಿರುವುದರಿಂದ ಪಿಸ್ತೂಲ್ ಪಡೆಯುವುದು ಬಹು ಅಪಾಯಕಾರಿ ಎಂದು ಪೊಲೀಸರು ತಿಳಿಸಿದ್ದರು.ಈ ಸಂಬಂಧ ನೋಟಿಸ್ ನ್ನು ಕೂಡ ಜಾರಿಗೊಳಿಸಿದ್ದರು. ಅಂತಿಮವಾಗಿ ಗನ್ ಲೈಸೆನ್ಸ್ ಅಮಾನತುಗೊಳಿಸಿದ್ದರು. ಈ ಸಂಬಂಧ ಈಗ ತನ್ನ ರಕ್ಷಣೆಗೆ ಪಿಸ್ತೂಲ್ ,ಬೇಕೆಂಬುದು ನಟ ದರ್ಶನ್ ವಾದವಾಗಿದೆ.
ಶ್ರೇಯಸ್ ಅಯ್ಯರ್ – ಬಾಲ್ ಬಾಯ್ನಿಂದ IPL ಕ್ಯಾಪ್ಟನ್ ವರೆಗೆ ಒಂದು ಅದ್ಭುತ ಪ್ರಯಾಣ!
ಭಾರತೀಯ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರ IPL ಜರ್ನಿ ಸ್ಫೂರ್ತಿದಾಯಕವಾಗಿದೆ. 2008ರಲ್ಲಿ ನಡೆದ ಐಪಿಎಲ್ ಉದ್ಘಾಟನಾ ಸೀಸನ್ನಲ್ಲಿ, ಅವರು ಮುಂಬೈ ಇಂಡಿಯನ್ಸ್ (MI)...