H D Kumaraswamy | ಮುಂದಿನ ಬಾರಿ ನಾನೇ ಸಿಎಂ
ತುಮಕೂರು : 2023 ರಲ್ಲಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಕುಮಾರಸ್ವಾಮಿ ಮಾತನಾಡಿ, ಮುಂದಿನ ಬಾರಿ ನಾನೇ ಸಿಎಂ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾಮಿಜಿಗಳ ಆಸೆ ಈಡೇರಿಸಿಯೇ ಈಡೇತಿಸುತ್ತೇವೆ. ಪರಮ ಪೂಜ್ಯರು ಹೇಳಿದಂತೆ 2023 ರಲ್ಲಿ ನಾನೇ ಮುಖ್ಯಮಂತ್ರಿ ಆಗ್ತಿನಿ ಎಂಬ ನಂಬಿಕೆ ಇದೆ. ಅದು ಹೇಗ್ ಬೇಕಾದರೂ ಆಗಬಹುದು.
ಜೆ.ಡಿ.ಎಸ್ ಮುಗಿದೆ ಹೊಯ್ತು ಅನ್ನಲಿ. ಜನಗಳ ಆಶೀರ್ವಾದದಲ್ಲಿ ಪುನಃ ನಾನು ಸಿಎಂ ಆಗ್ತಿನಿ ಎನ್ನುವ ವಿಶ್ವಾಸ ಇದೆ.

ಸ್ವಾಮಿಜಿಗಳ ಹಾಗೂ ಜನಗಳ ಆಶೀರ್ವಾದದಿಂದ 2023 ರ ಪುನಃ ನಾನು ಯಾವ ರೀತಿ ಮುಖ್ಯಮಂತ್ರಿ ಆಗ್ತಿನೋ ಗೊತ್ತಿಲ್ಲಮುಖ್ಯಮಂತ್ರಿ ಆಗುವ ವಿಶ್ವಾಸ ಖಂಡಿತ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಇದೇ ವೇಳೆ ಕುಂಚಿಟಿಗರನ್ನು ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರಿಸುವ ವಿಚಾರವಾಗಿ ಸ್ಪಂದಿಸಿದ ಕುಮಾರಸ್ವಾಮಿ, ಸಿಎಂ ಬೊಮ್ಮಾಯಿ ನನ್ನ ಜೊತೆ ಚೆನ್ನಾಗಿದ್ದಾರೆ.
ಅವರಿಗೆ ಹೇಳಿ ಒಬಿಸಿ ಪಟ್ಟಿಗೆ ಸೇರಿಸಲು ಪ್ರಯತ್ನ ಮಾಡುತ್ತೇನೆ. ನನ್ನನ್ನು ಬಿಜೆಪಿ ಬಿ ಟೀಮ್ ಎಂದರೂ ಪರವಾಗಿಲ್ಲ.
ನಾನು ಬಿಜೆಪಿ ನಾಯಕರಿಗೆ ಹೇಳಿ ಕುಂಚಿಟಿಗರನ್ನು ಒಬಿಸಿಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.








