ಬೆಂಗಳೂರು: ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ ಎನ್ನುವ ಮೂಲಕ ಸಿದ್ದರಾಮಯ್ಯ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ಯಾವುದೇ ಅನುಮಾನ ಬೇಡ. ಸಿಎಂ ಆಗಿ ಅವಧಿ ಮುಗಿಯುವವರೆಗೂ ನಾನೇ ಇರುತ್ತೇನೆ. ನನ್ನನ್ನು ಕಂಡರೆ ಬಿಜೆಪಿ, ಜೆಡಿಎಸ್ ನವರಿಗೆ ಭಯ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ, ಸಿಎಂ ಆಗಿ ನಾನೇ ಮುಂದುವರೆಯುವುದು ನಿಶ್ಚಿತ ಎಂದಿದ್ದಾರೆ. ಈ ಮೂಲಕ ಸಿಎಂ ರೇಸ್ ನಲ್ಲಿದ್ದವರಿಗೆ ಕೌಂಟರ್ ಕೊಟ್ಟಿದ್ದಾರೆ.
ಆದರೆ, ಸಿಎಂ ಮಾತ್ರ ಯಾರೂ ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡಿಲ್ಲ. ನಮ್ಮಲ್ಲಿ ಕುರ್ಚಿ ಖಾಲಿ ಇಲ್ಲ. ಸಿಎಂ ಆಗುತ್ತೇವೆಂದು ಯಾರೂ ಹೇಳಿಯೇ ಇಲ್ಲ. ಅವರೆಲ್ಲರೂ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಅಂತಾ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಸೂಚಿಸಿದರೆ ಸಿಎಂ ಆಗುತ್ತೇನೆ ಎಂದು ಕೆಲವರು ಹೇಳಿದ್ದಾರೆ ಎಂದಿದ್ದಾರೆ.








