IB Recruitment 2023 : ಗುಪ್ತಚರ ಇಲಾಖೆಯಲ್ಲಿ 1675 ಹುದ್ದೆಗಳ ನೇಮಕಾತಿ….
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಟೆಲಿಜೆನ್ಸ್ ಬ್ಯೂರೋ ಸೆಕ್ಯುರಿಟಿ ಅಸಿಸ್ಟೆಂಟ್ಸ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 17, 2023 . ಅಭ್ಯರ್ಥಿಗಳು ಅರ್ಜಿಗಳನ್ನ ಆನ್ಲೈನ್ ಮೂಲಕ ಸಲ್ಲಿಸಬೇಕು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಎರಡು ವೆಬ್ಸೈಟ್ಗಳ ಮೂಲಕ ತಮ್ಮ ಅರ್ಜಿ ನಮೂನೆಯನ್ನ ಭರ್ತಿ ಮಾಡಬಹುದು www.mha.gov.in ಅಥವಾ www.ncs.gov.in.
ಅಭ್ಯರ್ಥಿ ಆಯ್ಕೆಯ ಮಾನದಂಡಗಳು ಈ ರೀತಿ ಇದೆ.
ಖಾಲಿ ಹುದ್ದೆಗಳ ಸಂಖ್ಯೆ 1675 : ಅದರಲ್ಲಿ ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ ಅಥವಾ MTS 150 ಮತ್ತು ಭದ್ರತಾ ಸಹಾಯಕ/ಕಾರ್ಯನಿರ್ವಾಹಕ 1525 ಹುದ್ದೆಗಳು
ಶೈಕ್ಷಣಿಕ ಮತ್ತು ಇತರ ಅರ್ಹತೆಗಳು
ಅಭ್ಯರ್ಥಿಗಳು ಯಾವುದೇ ಅಧಿಕೃತ ಶಿಕ್ಷಣ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಇದರ ಹೊರತಾಗಿ, ಅಭ್ಯರ್ಥಿಯು IB ನೇಮಕಾತಿಗೆ ಅರ್ಜಿ ಸಲ್ಲಿಸುತ್ತಿರುವ ರಾಜ್ಯದಲ್ಲಿ ನಿವಾಸವನ್ನ ಹೊಂದಿರಬೇಕು.
ಕೊನೆಯದಾಗಿ, ಅಭ್ಯರ್ಥಿಯು ಆ ನಗರದಲ್ಲಿ ಮಾತನಾಡುವ ಭಾಷೆಯ ಜ್ಞಾನವನ್ನು ಹೊಂದಿರಬೇಕು. ಇದಕ್ಕಾಗಿ ಅಧಿಕೃತ ನೋಟಿಫಿಕೇಷನ್ ಗಳನ್ನ ಪರಿಶೀಲಿಸಿ…
ವಯೋಮಿತಿ
ಅರ್ಜಿ ನಮೂನೆಯ ಅಂತಿಮ ದಿನಾಂಕದಂದು ಅಭ್ಯರ್ಥಿಯು 27 ವರ್ಷಕ್ಕಿಂತ ಹೆಚ್ಚಿರಬಾರದು ಮತ್ತು 18 ವರ್ಷಗಳಿಗಿಂತ ಕಡಿಮೆಯಿರಬಾರದು. ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯು ಭಾರತ ಸರ್ಕಾರ ನಿಗದಿಪಡಿಸಿದ ನಿಯಮಗಳ ಪ್ರಕಾರ ಇರಲಿದೆ.
ಅರ್ಜಿ ಶುಲ್ಕ
UR, OBC ಮತ್ತು EWS ನ ಪುರುಷ ಅರ್ಜಿದಾರರು ರೂ 500/- ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ಅರ್ಜಿದಾರರು ರೂ 450/- ಪಾವತಿಸಬೇಕು.
IB Recruitment 2023 : Recruitment of 1675 Posts in Intelligence Department….








