ADVERTISEMENT
Sunday, April 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐಸಿಸಿ ಆಯ್ಕೆ ಮಾಡಿರೋದು ಐಪಿಎಲ್ ತಂಡ.. ಟಿ-20 ವಿಶ್ವ ತಂಡವನ್ನಲ್ಲ- ಶೋಯಿಬ್ ಅಖ್ತರ್ ಆಕ್ರೋಶ

admin by admin
December 28, 2020
in Newsbeat, Sports, ಕ್ರೀಡೆ
Shoaib Akhtar pakistan saakshatv
Share on FacebookShare on TwitterShare on WhatsappShare on Telegram

ಐಸಿಸಿ ಆಯ್ಕೆ ಮಾಡಿರೋದು ಐಪಿಎಲ್ ತಂಡ.. ಟಿ-20 ವಿಶ್ವ ತಂಡವನ್ನಲ್ಲ- ಶೋಯಿಬ್ ಅಖ್ತರ್ ಆಕ್ರೋಶ

babar azam pakistan saakshatvಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಐಸಿಸಿ ದಶಕದ ಟಿ-20, ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಆಯ್ಕೆ ಮಾಡಿದೆ.
ಈ ತಂಡಗಳಲ್ಲಿ ಪಾಕಿಸ್ತಾನ ಆಟಗಾರರಿಗೆ ಅವಕಾಶವೇ ಸಿಕ್ಕಿಲ್ಲ. ಮೂರು ಮಾದರಿಯ ತಂಡಗಳಲ್ಲೂ ಪಾಕ್ ಆಟಗಾರರು ಇಲ್ಲ. ಬಹುತೇಕ ಆಟಗಾರರು ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಆಟಗಾರರಿದ್ದಾರೆ. ಅಲ್ಲದೆ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಏಕದಿನ ಮತ್ತು ಟಿ-ಟ್ವೆಂಟಿ ತಂಡಗಳಿಗೆ ಮಹೇಂದ್ರ ಸಿಂಗ್ ಧೋನಿಯವರನ್ನು ಆಯ್ಕೆ ಮಾಡಿದೆ.
ಇದೀಗ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಐಸಿಸಿ ವಿರುದ್ಧ ಕಿಡಿ ಕಾರಿದ್ದಾರೆ.
ಐಸಿಸಿ ಆಯ್ಕೆ ಮಾಡಿರೋದು ಐಪಿಎಲ್ ತಂಡವನ್ನು. ಟಿ-ಟ್ವೆಂಟಿ ತಂಡವನ್ನಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ಪಾಕಿಸ್ತಾನ ತಂಡದ ನಾಯನ ಬಾಬರ್ ಅಝಾಮ್ ಅವರನ್ನು ಐಸಿಸಿ ದಶಕದ ಟಿ- 20 ತಂಡದಲ್ಲಿ ಸೇರಿಸಿಕೊಳ್ಳದಿರುವ ಬಗ್ಗೆ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಪಾಕಿಸ್ತಾನ ಐಸಿಸಿ ಸದಸ್ಯತ್ವವನ್ನು ಪಡೆದುಕೊಂಡಿದೆ ಎಂಬುದನ್ನು ಮರೆತಂತಿದೆ. ಬಾಬರ್ ಅಝಮ್ ಅವರು ಸದ್ಯ ಐಸಿಸಿ ಟಿ-ಟ್ವೆಂಟಿಯ ನಂಬರ್ ವನ್ ಬ್ಯಾಟ್ಸ್ ಮೆನ್. ಅಲ್ಲದೆ ಪಾಕಿಸ್ತಾನದ ಪುರುಷ ಮತ್ತು ಮಹಿಳಾ ಆಟಗಾರರನ್ನು ಈ ತಂಡಗಳಲ್ಲಿ ಪರಿಗಣಿಸಿಲ್ಲ. ನಿಮ್ಮ ಐಸಿಸಿ ದಶಕದ ಟಿ-ಟ್ವೆಂಟಿ ತಂಡ ನಮಗೆ ಬೇಕಿಲ್ಲ. ನೀವು ಆಯ್ಕೆ ಮಾಡಿರೋದು ಐಪಿಎಲ್ ತಂಡವನ್ನು. ವಿಶ್ವ ತಂಡವನ್ನಲ್ಲ ಅಂತ ಅಖ್ತರ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಐಸಿಸಿ ಧೋರಣೆಯ ಬಗ್ಗೆಯೂ ಕಿಡಿ ಕಾರಿರುವ ಶೋಯಿಬ್ ಅಖ್ತರ್, ಐಸಿಸಿಗೆ ಬೇಕಾಗಿರೋದು ದುಡ್ಡು ಮಾತ್ರ. ಮೂರು ವರ್ಷಗಳ ಅಂತರದಲ್ಲಿ ಎರಡು ವಿಶ್ವ ಕಪ್ ಟೂರ್ನಿಗಳನ್ನು ಆಡಿಸ್ತಾರೆ. ಏಕದಿನ ಕ್ರಿಕೆಟ್ ನಲ್ಲಿ ಎರಡು ಹೊಸ ಚೆಂಡುಗಳು, ಮೂರು ಪವರ್ ಪ್ಲೇ ನಿಯಮಗಳನ್ನು ಜಾರಿಗೆ ತಂದಿದ್ದಾರೆ. 70ರ ದಶಕದ ಕ್ರಿಕೆಟ್ ಎಲ್ಲಿ, ಈಗಿನ ಕ್ರಿಕೆಟ್ ಎಲ್ಲಿ ಎಂದು ಅಖ್ತರ್ ಪ್ರಶ್ನೆ ಮಾಡಿದ್ದಾರೆ. ದುಡ್ಡಿನ ಹಿಂದೆ ಬಿದ್ದಿರುವ ಐಸಿಸಿಗೆ ನೇರ ಪ್ರಸಾರದ ಹಕ್ಕು, ಜಾಹಿರಾತು ಬಂದ್ರೆ ಸಾಕು. ನಿಜವಾದ ಕ್ರಿಕೆಟ್ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿರುವ ಹಾಗೂ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಶೋಯಿಬ್ ಅಖ್ತರ್ ಇದೀಗ ಐಸಿಸಿ ವಿರುದ್ಧವೇ ಕೆಂಡ ಕಾರಿದ್ದಾರೆ.

Related posts

ಮೋದಿ ಮಾಡಿದ್ದು ಸಾಲ ಅಲ್ವಾ ಬಜೆಟ್ ಟೀಕಿಸಿದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

ಮೋದಿಗೆ ಸಾಮಾನ್ಯ ಜ್ಞಾನವಿಲ್ಲ ತಿಲಕ ಇಡುವ ಕೇಸರಿ ಬರುವುದೂ ಮುಸ್ಲಿಂ ರಾಷ್ಟ್ರಗಳಿಂದಲೇ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

April 11, 2026
ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

April 11, 2026
Tags: #saakshatvbabar azamICCicc awardsicc awards 2020icc one day cricketicc t-20icc test cricketIPLpclShoaib Akhtarworld cricket
ShareTweetSendShare
Join us on:

Related Posts

ಮೋದಿ ಮಾಡಿದ್ದು ಸಾಲ ಅಲ್ವಾ ಬಜೆಟ್ ಟೀಕಿಸಿದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ನೇರ ಪ್ರಶ್ನೆ

ಮೋದಿಗೆ ಸಾಮಾನ್ಯ ಜ್ಞಾನವಿಲ್ಲ ತಿಲಕ ಇಡುವ ಕೇಸರಿ ಬರುವುದೂ ಮುಸ್ಲಿಂ ರಾಷ್ಟ್ರಗಳಿಂದಲೇ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

by Shwetha
April 11, 2026
0

ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆಯೂ ಇಲ್ಲ ಎಂದು ನೇರವಾಗಿ ಟೀಕಿಸಿದ್ದಾರೆ. ಅಲ್ಪಸಂಖ್ಯಾತರ...

ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಇನ್ನು ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕಳುಹಿಸಿದರೆ ಒಂದು ಗಂಟೆ ಕಾಯಲೇಬೇಕು : ಕಿಲ್ ಸ್ವಿಚ್ ಆಯ್ಕೆ ಬಗ್ಗೆ ನಿಮ್ಗೆ ಗೊತ್ತಾ?

by Shwetha
April 11, 2026
0

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ದೇಶದಾದ್ಯಂತ ಕ್ರಾಂತಿ ಮಾಡಿರುವ ಯುಪಿಐ ಪಾವತಿ ಕ್ರಮದಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಬದಲಾವಣೆಯಾಗುವ ಸಾಧ್ಯತೆ ಇದೆ. ನೀವು ಪದೇ ಪದೇ ಹತ್ತು ಸಾವಿರ...

‘ಝೂಂಬಿ ಡ್ರಗ್ಸ್’ ಸುಳ್ಳು ವಿಡಿಯೋ ವೈರಲ್: ಆರೋಪಿಯ ಬಂಧನ

‘ಝೂಂಬಿ ಡ್ರಗ್ಸ್’ ಸುಳ್ಳು ವಿಡಿಯೋ ವೈರಲ್: ಆರೋಪಿಯ ಬಂಧನ

by Shwetha
April 11, 2026
0

‘ಝೂಂಬಿ ಡ್ರಗ್ಸ್’ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ....

ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ; ಉದ್ವಿಗ್ನತೆ ಹೆಚ್ಚಳ

ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ; ಉದ್ವಿಗ್ನತೆ ಹೆಚ್ಚಳ

by Shwetha
April 11, 2026
0

ಪಾಕಿಸ್ತಾನದಲ್ಲಿ ಇಂದು ಅಥವಾ ನಾಳೆ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಸಭೆ ಮುಂದೂಡಿಕೆಯಾಗಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಈ ಮಹತ್ವದ ಶಾಂತಿ ಮಾತುಕತೆ ನಡೆಯಬೇಕಾಗಿತ್ತು....

ಆಘಾತಕಾರಿ ಘಟನೆ: ತರಗತಿಯಲ್ಲೇ ಬಾಲಕಿಯ ಮೇಲೆ ಶಿಕ್ಷಕನಿಂದ ದೌರ್ಜನ್ಯ ಆರೋಪ

ಆಘಾತಕಾರಿ ಘಟನೆ: ತರಗತಿಯಲ್ಲೇ ಬಾಲಕಿಯ ಮೇಲೆ ಶಿಕ್ಷಕನಿಂದ ದೌರ್ಜನ್ಯ ಆರೋಪ

by Shwetha
April 11, 2026
0

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿಯ ಮೇಲೆ ಗಣಿತ ಶಿಕ್ಷಕನೊಬ್ಬ ತರಗತಿ ಕೊಠಡಿಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram