ICC Award T20 ಕ್ರಿಕೆಟ್ ವಾರ್ಷಿಕ ಪ್ರಶಸ್ತಿ – ರೇಸ್ ನಲ್ಲಿ ‘ಸೂರ್ಯ’
ಭಾರತದ ಯುವ ತಾರಾ ಬ್ಯಾಟರ್ ಸೂರ್ಯ ಕುಮಾರ್ ಮತ್ತು ಸ್ಮತಿ ಮಂಧನಾ ಪುರುಷ ಮತ್ತು ಮಹಿಳಾ ಟಿ20 ಕ್ರಿಕೆಟ್ನ ವಾರ್ಷಿಕ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಈ ವರ್ಷ ಮಿಸ್ಟರ್ 360 ಖ್ಯಾತಿಯ ಸೂರ್ಯ ಕುಮಾರ್ ಟಿ20 ಕ್ರಿಕೆಟ್ನಲ್ಲಿ ಸೋಟಕ ಬ್ಯಾಟಿಂಗ್ ಮಾಡಿ ರನ್ ಮಳೆ ಸುರಿಸಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್ ಪೂರೈಸಿದ ಎರಡನೆ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಸೂರ್ಯ ಕುಮಾರ್ ಈ ವರ್ಷ ಟಿ20 ಕ್ರಿಕೆಟ್ನಲ್ಲಿ 2 ಶತಕ 9 ಅರ್ಧ ಶತಕ ಸಿಡಿಸಿದ್ದಾರೆ. 68 ಸಿಕ್ಸರ್ ಸೇರಿ 1164 ರನ್ ಹೊಡೆದಿದ್ದು 187.43 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಜೊತೆಗೆ ಟಿ20 ರ್ಯಾಂಕಿಂಗ್ನಲ್ಲಿ 890 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸೋಟಕ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು.
ಇನ್ನು ಮಹಿಳಾ ವಿಭಾಗದಲ್ಲಿ ಪಾಕ್ ಆಲ್ರೌಂಡರ್ ನಿದಾ ದಾರ್, ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್,ಆಸ್ಟ್ರೇಲಿಯಾದ ತಾಹಿಲಾ ಮೆಕ್ಗ್ರೆತ್ ಭಾರತದ ಸ್ಮತಿ ಮಂಧನಾಗೆ ಪೈಪೋಟಿ ನೀಡಲಿದ್ದಾರೆ.
ಈ ವರ್ಷ ಭರ್ಜರಿ ಬ್ಯಾಟಿಂಗ್ ಮಾಡಿರುವ ಸ್ಮತಿ ಮಂಧನಾ ಟಿ20 ಕ್ರಿಕೆಟ್ನಲ್ಲಿ 23 ಎಸೆತದಲ್ಲಿ ಅರ್ಧ ಶತಕ, 2,500 ರನ್ ಹೊಡೆದಿದ್ದಾರೆ. ಕಾಮನ್ವೆಲ್ತ್, ಏಷ್ಯಾಕಪ್ ಮತ್ತು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಐಸಿಸಿ ಏಕದಿನ ಪ್ರಶಸ್ತಿಗೆ ನಾಮನಿರ್ದೇಶನ
ಐಸಿಸಿ ಏಕದಿನ ಪ್ರಶಸ್ತಿಗೆ ಪಾಕ್ ತಂಡದ ನಾಯಕ ಬಾಬರ್ ಅಜಂ, ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಮ್ ಜಾಂಪ, ವೆಸ್ಟ್ಇಂಡೀಸ್ ಬ್ಯಾಟರ್ ಶಾಯ್ ಹೋಪ್, ಜಿಂಬಾಬ್ವೆ ಆಲ್ರೌಂಡರ್ ಸಿಕಂದರ್ ರಾಝಾ ನಾಮನಿರ್ದೇಶನಗೊಂಡಿದ್ದಾರೆ.
ICC Award T20 cricket Annual Award,surya kumar yadav is in Race