ಐಸಿಸಿ ಸಿಇಒ ಮನು ಸಾಹ್ನಿ ರಾಜೀನಾಮೆಗೆ ಕಾರಣ ಏನು..?

1 min read
Manu Sahni

ಐಸಿಸಿ ಸಿಇಒ ಮನು ಸಾಹ್ನಿ ರಾಜೀನಾಮೆಗೆ ಕಾರಣ ಏನು..?

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಿಇಒ ಮನು ಸಾಹ್ನಿ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ಅವರ ವಿರುದ್ಧ ದುರ್ವರ್ತನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿತ್ತು.

ಮನು ಸಾಹ್ನಿ ರಾಜೀನಾಮೆಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ.

ಜೆಫ್ ಅಲಾರ್ಡಿಸ್ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

Manu Sahni

ಅವರಿಗೆ ಐಸಿಸಿಯ ಆಡಳಿತ ಮಂಡಳಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಐಸಿಸಿ ತಿಳಿಸಿದೆ.

2019ರ ವಿಶ್ವಕಪ್ ನಂತರ ಡೇವ್ ರಿಚಡ್ರ್ಸನ್ ಬದಲಿಗೆ ಸಾವ್ನಿ ಅವರನ್ನು ನೇಮಕ ಮಾಡಲಾಗಿತ್ತು. 2022ರ ವರೆಗೆ ಅವರ ಅವಧಿ ಇತ್ತು.

ಕಳೆದ ವರ್ಷ ಚುನಾವಣೆ ಘೋಷಣೆಯಾದ ನಂತರ ಸಾವ್ನಿ ಒತ್ತಡಕ್ಕೆ ಒಳಗಾಗಿದ್ದರು.

56 ವರ್ಷದ ಸಾವ್ನಿ ಅವರ ವರ್ತನೆ ಬಗ್ಗೆ ಈ ಸಂದರ್ಭದಲ್ಲಿ ಹೆಚ್ಚು ಆರೋಪಗಳು ಕೇಳಿಬಂದಿದ್ದವು.

ವಿವಿಧ ನೀತಿ ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಭಾವಿ ಕ್ರಿಕೆಟ್ ಮಂಡಳಿಗಳೊಂದಿಗೆ ಉತ್ತಮ ಒಪ್ಪಂದವನ್ನು ಹೊಂದಿಲ್ಲ ಎಂಬ ಆರೋಪಗಳು ಕೂಡ ಅವರ ಮೇಲಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd