T20 World Cup 2022 | ಇಂದಿನಿಂದ ರಣರೋಚಕ ಟಿ 20 ವಿಶ್ವಕಪ್ ಶುರು
ಕ್ರಿಕೆಟ್ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿರುವ ಟಿ 20 ವಿಶ್ವಕಪ್ 2022 ಇಂದಿನಿಂದ ಆರಂಭವಾಗುತ್ತಿದ್ದು, ಭಾರತ ಸೇರಿದಂತೆ 16 ತಂಡಗಳು ಭಾಗಿಯಾಗಿವೆ.
ಅಕ್ಟೋಬರ್ 16 ರಿಂದ ನವೆಂಬರ್ 13ರವರೆಗೆ ಈ 16 ತಂಡಗಳು ಹಣಾಹಣಿ ನಡೆಸಲಿವೆ.
ಒಟ್ಟು 16 ತಂಡಗಳು
ಗ್ರೂಪ್ ಎ : ನಮಿಬಿಯಾ, ನೆದರ್ ಲ್ಯಾಂಡ್, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೈಟ್ಸ್
ಗ್ರೂಪ್ ಬಿ : ಐರ್ಲೆಂಡ್, ಸ್ಕಾಟ್ಲಾಂಡ್, ವೆಸ್ಟ್ ಇಂಡಿಸ್, ಜಿಂಬಾಬ್ವೆ
ಈ ಎಂಟು ತಂಡಗಳು ಕ್ವಾಲಿಫೈಯರ್ ಮ್ಯಾಚ್ ಗಳಲ್ಲಿ ಸೆಣಸಲಿವೆ.

ಸೂಪರ್ 12
ಗ್ರೂಪ್ 1 : ಅಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಗ್ರೂಪ್ ಎ ತಂಡದಲ್ಲಿ ಗೆದ್ದ ತಂಡ – ಗ್ರೂಪ್ ಬಿ ರನ್ನರ್ ಅಪ್
ಗ್ರೂಪ್ 2 : ಬಾಂಗ್ಲಾದೇಶ, ಇಂಡಿಯಾ, ಪಾಕಿಸ್ತಾನ್, ಸೌತ್ ಆಫ್ರಿಕಾ, ಗ್ರೂಪ್ ಎ ತಂಡದಲ್ಲಿ ಗೆದ್ದ ತಂಡ – ಗ್ರೂಪ್ ಬಿ ರನ್ನರ್ ಅಪ್
ಆಸ್ಟ್ರೇಲಿಯಾದ ಬ್ರಿಸ್ಬೇನ್ ನ ಗಬ್ಬಾ, ಅಡಿಲೈಡ್ ನ್ ಒವಲ್, ಸಿಡ್ನಿ ಕ್ರಿಕೆಟ್ ಗ್ರೌಂಡ್, ಗಿಲಾಂಗ್ ನ ಕರ್ದಿನಿಯಾ ಪಾರ್ಕ್, ಹಾಬರ್ಟ್ ನ ಬೆಲರಿವ್ ಒವಲ್, ಪರ್ಥ್ ಸ್ಟೆಡಿಯಂ, ಮೆಲ್ ಬಾರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಈ ಎಲ್ಲಾ ಪಂದ್ಯಗಳು ನಡೆಯಲಿವೆ.
ಸೂಪರ್ 12 ಹಾಗೂ ಅರ್ಹತಾ ಸುತ್ತು ಸೇರಿ 28 ದಿನಗಳಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ. ಈ ಬಾರಿ ವಿಶ್ವಕಪ್ ಗೆಲ್ಲುವ ತಂಡಕ್ಕೆ 13 ಕೋಟಿ ಬಹುಮಾನ ಇರಲಿದ್ದು, ರನ್ನರ್ ಅಪ್ ಗೆ 6.59 ಕೋಟಿ ಬಹುಮಾನ ಮೊತ್ತ ಸಿಗಲಿವೆ.