ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಗಳ ಹವಾ..! ICC
ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಗಳ ಹವಾ ಮುಂದುವರೆದಿದೆ. ಬರೋಬ್ಬರಿ ನಾಲ್ಕು ಬ್ಯಾಟರ್ ಗಳು ಟಾಪ್ 10 ರಲ್ಲಿ ಕಾಣಿಸಿಕೊಂಡಿದ್ದಾರೆ. ಆಶಸ್ ಸರಣಿಯ ಭಾಗವಾಗಿ ಇಂಗ್ಲೆಂಡ್ ಜೊತೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ಆಸೀಸ್ ಬ್ಯಾಟರ್ ಲಬೂಷನ್ (103,51) 912 ಅಂಕಗಳೊಂದಿಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಟಿವ್ ಸ್ಮಿತ್ 884 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ, ಡೇವಿಡ್ ವಾರ್ನನ್ 6ನೇ ಸ್ಥಾನದಲ್ಲಿ, ಟ್ರವಿಸ್ ಹೆಡ್ 728 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ಸಾರಥಿ ಜೋ ರೂಟ್ 897 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಟೀಂ ಇಂಡಿಯಾ ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ.
🔝 Labuschagne dethrones Root
💪 Starc makes significant gainsAustralia stars shine in the latest @MRFWorldwide ICC Men’s Test Player Rankings.
👉 https://t.co/DNEarZ8zhm pic.twitter.com/W3Aoiy3ARP
— ICC (@ICC) December 22, 2021
ಇನ್ನು ಬೌಲಿಂಗ್ ವಿಭಾಗದಲ್ಲೂ ಆಸೀಸ್ ಪ್ಲೇಯರ್ ಗಳ ಹವಾನೇ ಇದೆ. ಆಶಸ್ ಸರಣಿಯಲ್ಲಿ ಅಬ್ಬರಿಸುತ್ತಿರುವ ಮಿಚಲ್ ಸ್ಟಾರ್ಕ್ ಒಂದು ವರ್ಷದ ಬಳಿಕ ಟಾಪ್ 10 ರಲ್ಲಿ ಕಾಣಿಸಿಕೊಂಡಿದ್ದಾರೆ. ಆಸೀಸ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಮೊದಲ ಸ್ಥಾನದಲ್ಲಿದ್ದರೇ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.
ಮತ್ತೊಂದೆಡೆ, ಟೀ 20 ರ್ಯಾಂಕಿಂಗ್ಸ್‌ನಲ್ಲಿ ಪಾಕ್ ಕ್ಯಾಪ್ಟನ್ ಬಾಬರ್ ಆಜಮ್, ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ ಮೊದಲ ಸ್ಥಾನದಲ್ಲಿದ್ದಾರೆ. ಪಾಕ್ ಆರಂಭಿಕ ಮಹ್ಮದ್ ರಿಜ್ವಾನ್ 798 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಕೆಎಲ್ ರಾಹುಲ್ 729 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.







