ICC ODI Bowling Rankings: ಒನ್ ಡೇ ರ್ಯಾಂಕಿಂಗ್ಸ್ ನಲ್ಲಿ ಬುಮ್ರಾ ಬ್ಲಾಸ್ಟ್
ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ICC ODI Bowling Rankings ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಗ್ರಸ್ಥಾನಕ್ಕೆರಿದ್ದಾರೆ.
ಮೂರು ಸ್ಥಾನ ಮೇಲೇರಿ 718 ಅಂಕಗಳೊಂದಿಗೆ ವಿಶ್ವದ ನಂಬರ್ ಒನ್ ODI ಬೌಲರ್ ಎನಿಸಿಕೊಂಡಿದ್ದಾರೆ.
ಬುಮ್ರಾ ಹೊರತುಪಡಿಸಿ ಯಾವುದೇ ಭಾರತೀಯ ಬೌಲರ್‌ಗಳು ಅಗ್ರ 10ರೊಳಗೆ ಕಾಣಿಸಿಕೊಂಡಿಲ್ಲ.
ಓವಲ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7.2 ಓವರ್ ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.
ICC ODI ಶ್ರೇಯಾಂಕದಲ್ಲಿ ಇವರೇ ಟಾಪ್ 10 ಬೌಲರ್‌ಗಳು!
- ಜಸ್ಪ್ರೀತ್ ಬುಮ್ರಾ (ಭಾರತ)
- ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
- ಶಾಹೀನ್ ಅಫ್ರಿದಿ (ಪಾಕಿಸ್ತಾನ)
- ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ)
- ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ)
- ಮೆಹೆದಿ ಹಸನ್ (ಬಾಂಗ್ಲಾದೇಶ)
- ಕ್ರಿಸ್ ವೋಕ್ಸ್ (ಇಂಗ್ಲೆಂಡ್)
- ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್)
- ಮೊಹಮ್ಮದ್ ನಬಿ (ಅಫ್ಘಾನಿಸ್ತಾನ)
- ರಶೀದ್ ಖಾನ್ (ಅಫ್ಘಾನಿಸ್ತಾನ)