ICC T20 Rankings: 44 ಸ್ಥಾನಗಳ ಸುಧಾರಣೆ.. ಏಕಾಏಕಿ ಟಾಪ್ ಫೈವ್ ಗೆ ಎಂಟ್ರಿ
ಐಸಿಸಿ ಟಿ20 ಕ್ರಿಕೆಟ್ ಬ್ಯಾಟಿಂಗ್ ರ ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸೂರ್ಯಕುಯರ್ ಯಾದವ್ ಧೂಳೆಬ್ಬಿಸಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಐಸಿಸಿ ಟಿ 20 ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 44 ಸ್ಥಾನ ಮೇಲೇರಿದ್ದಾರೆ.
ಒಟ್ಟು 732 ಅಂಕಗಳನ್ನು ಗಳಿಸಿ ವೃತ್ತಿಜೀವನದಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಸದ್ಯ ಸೂರ್ಯಕುಮಾರ್ ಯಾದವ್ ಐದನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ 39 ರನ್ ಗಳಿಸಿದ್ದ ಸೂರ್ಯ ಎರಡನೇ ಪಂದ್ಯದಲ್ಲಿ 15 ರನ್ ಗಳಿಸಿದ್ದರು.
ಆದರೆ, ಮೂರನೇ ಟಿ20 ಪಂದ್ಯದಲ್ಲಿ ಈ ಮುಂಬೈ ಬ್ಯಾಟ್ಸ್ ಮನ್ ವಿಶ್ವರೂಪ ತೋರಿಸಿದ್ರು.

ಅವರು 55 ಎಸೆತಗಳಲ್ಲಿ 14 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 212 ಸ್ಟ್ರೈಕ್ ರೇಟ್‌ನಲ್ಲಿ 117 ರನ್ ಗಳಿಸಿದರು.
ICC T20 ಬ್ಯಾಟಿಂಗ್ ಶ್ರೇಯಾಂಕಗಳು – ಟಾಪ್ 10 ಇಂತಿವೆ:
- ಬಾಬರ್ ಅಜಮ್ (ಪಾಕಿಸ್ತಾನ) – 818 ಅಂಕಗಳು
- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) – 794 ಅಂಕಗಳು
- ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ) – 757 ಅಂಕಗಳು
- ಡೇವಿಡ್ ಮಲನ್ (ಇಂಗ್ಲೆಂಡ್) – 754 ಅಂಕಗಳು
- ಸೂರ್ಯಕುಮಾರ್ ಯಾದವ್ (ಭಾರತ) – 732 ಅಂಕಗಳು
- ಆರನ್ ಫಿಂಚ್ (ಆಸ್ಟ್ರೇಲಿಯಾ) – 716 ಅಂಕಗಳು
- ಡೆವೊನ್ ಕಾನ್ವೇ (ನ್ಯೂಜಿಲೆಂಡ್) – 703 ಅಂಕಗಳು
- ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್) – 667 ಅಂಕಗಳು
- ಪಾತುಮ್ ನಿಶಾಂಕ (ಶ್ರೀಲಂಕಾ) – 661 ಅಂಕಗಳು
10. ಮಾರ್ಟಿನ್ ಗುಫ್ಟಲ್ (ನ್ಯೂಜಿಲೆಂಡ್), ರಾಸಿ ವ್ಯಾನ್ ಡೆರ್ ಡ್ಯುಸೆನ್ (ದಕ್ಷಿಣ ಆಫ್ರಿಕಾ) – 658 ಅಂಕಗಳು.