ICC Test championship ಜೂ.7ರಿಂದ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್
2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಜೂ.7ರಿಂದ 11ರವರೆಗೆ ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಐಸಿಸಿ ಘೋಷಿಸಿದೆ.
ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಜೂ.12 ಮೀಸಲು ದಿನವಾಗಿ ಆಡಿಸಲಾಗುತ್ತದೆ.
ದಕ್ಷಿಣ ಲಂಡನ್ ನ ದಿ ಓವೆಲ್ ಮೈದಾನ 100ಕ್ಕೂ ಹಚ್ಚು ಟೆಸ್ಟ್ ಗಳಿಗೆ ಆತಿತ್ಯ ವಹಸಿದ್ದು ಇತಿಹಾಸ ಹೊಂದಿದೆ. ಟೆಸ್ಟ್ ಚಾಂಪಿಯನ್ ಶಿಪ್ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ನಲ್ಲಿ ಸೆಣಸಲಿವೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 2 ವರ್ಷಗಳಲ್ಲಿ 24 ಸರಣಿಗಳ 61 ಪಂದ್ಯಗಳು ಪೂರ್ಣಗೊಂಡಿದ್ದು ಫೈನಲ್ನಲ್ಲಿ ಸೆಣಸುವ ತಂಡಗಳು ಯಾವುದೆಂದು ಇನ್ನು ನಿರ್ಧಾರವಾಗಿಲ್ಲ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಭಾರತ 2ನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಫೈನಲ್ನಲ್ಲಿ ಆಡಲಿರುವ ನೆಚ್ಚಿನ ತಂಡಗಳಾಗಿವೆ.
2019-2021ರ ಫೈನಲ್ ನಲ್ಲಿ ಭಾರತ ನ್ಯೂಜಿಲೆಂಡ್ ತಂಡಗಳು ಸೆಣಸಿದ್ದವು. ನ್ಯೂಜಿಲೆಂಡ್ 8 ವಿಕೆಟ್ ಜಯ ಸಾಧಿಸಿ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದುಕೊಂಡಿತು. ಪಂದ್ಯಕ್ಕೆ ಇಂಗ್ಲೆಂಡ್ನ ಸೌಥಾಂಪ್ಟನ್ ರೋಸ್ ಬೌಲ್ ಕ್ರೀಡಾಂಗಣ ಆತಿಥ್ಯ ವಹಿಸಿತ್ತು.
ICC Test championship finals begins from june 7th