ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ- ಸ್ಮಿತ್ ಟಾಪ್ ವನ್.. ವಿರಾಟ್, ವಿಲಿಯಮ್ಸನ್ ಜಂಟಿಯಾಗಿ ಎರಡನೇ ಸ್ಥಾನ
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಜೊತೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಚೇತೇಶ್ವರ ಪೂಜಾರ ಅವರು ಏಳನೇ ಸ್ಥಾನದಲ್ಲಿದ್ದಾರೆ. ಅಜ್ಯಂಕ್ಯಾ ರಹಾನೆ ಮತ್ತು ಮಯಾಂಕ್ ಅಗರ್ ವಾಲ್ ಕ್ರಮವಾಗಿ 11 ಮತ್ತು 12ನೇ ಸ್ಥಾನದಲ್ಲಿದ್ದಾರೆ.
ಹಾಗೇ ಆಲ್ ರೌಂಡರ್ ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅವರು ಅಗ್ರ ಸ್ಥಾನದಿಂದ ಕೆಳಗಿಳಿದಿದ್ದಾರೆ. ವೆಸ್ಟ್ ಇಂಡೀಸ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಅಲ್ಲದೆ ಜೇಸನ್ ಹೋಲ್ಡರ್ ಉತ್ತಮ ಪ್ರದರ್ಶನ ಕೂಡ ನೀಡಿರಲಿಲ್ಲ. ಹೀಗಾಗಿ ಅಗ್ರ ಸ್ಥಾನ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಪಾಲಾಗಿದೆ. ಇನ್ನು ಭಾರತದ ಪರ ರವೀಂದ್ರ ಜಡೇಜಾ
ಮೂರನೇ ಸ್ಥಾನ ಹಾಗೂ ಆರ್ ಅಶ್ವಿನ್ ಆರನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಜಸ್ಪ್ರಿತ್ ಬೂಮ್ರಾ 9ನೇ ಸ್ಥಾನದಲ್ಲಿದ್ರೆ ಆರ್. ಅಶ್ವಿನ್ 11 ಸ್ಥಾನದಲ್ಲಿದ್ದಾರೆ. ಮಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಕ್ರಮವಾಗಿ 13, 17 ಮತ್ತು 18ನೇ ಸ್ಥಾನದಲ್ಲಿದ್ದಾರೆ.
ಡಿಸೆಂಬರ್ 17ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
.








