IDBI ಬ್ಯಾಂಕ್ ನಲ್ಲಿ 1544 ಹುದ್ದೆಗಳಿಗೆ ನೇಮಕಾತಿ ಅರ್ಜಿ ಅಹ್ವಾನ
ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) 1544 ಕಾರ್ಯನಿರ್ವಾಹಕ ಮತ್ತು ಸಹಾಯಕ ವ್ಯವಸ್ಥಾಪಕರ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಿದೆ.
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ:
ಕಾರ್ಯನಿರ್ವಾಹಕರು ( ಕಾಂಟ್ರಾಂಕ್ಟ್ ಬೇಸಿಸ್ )- 1044 ಹುದ್ದೆಗಳು
ಅಸಿಸ್ಟೆಂಟ್ ಮ್ಯಾನೇಜರ್, ಗ್ರೇಡ್ ‘ಎ’- 500 ಹುದ್ದೆಗಳು
ಶಿಕ್ಷಣ ಅರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ. ಭಾರತದ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ ಪ್ರಮಾಣ ಪತ್ರ ಪಡೆದಿರಬೇಕು.
ವಯಸ್ಸಿನ ಮಿತಿ (01-04-2022 ರಂತೆ)
ಕಾರ್ಯನಿರ್ವಾಹಕರು – 20-25 ವರ್ಷಗಳು
ಸಹಾಯಕ ವ್ಯವಸ್ಥಾಪಕ: 21-28 ವರ್ಷಗಳು
ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಗೆ ಅವಕಾಶವಿದೆ.
ಅರ್ಜಿ ಶುಲ್ಕ:
ಇತರರಿಗೆ: ರೂ 1000, SC/ST/PWD ಅಭ್ಯರ್ಥಿಗಳಿಗೆ- ರೂ 200
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿಯ ಪ್ರಾರಂಭ: 03-06-2022
ಕೊನೆಯ ದಿನಾಂಕ: 17-06-2022
ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ- ಕಾರ್ಯನಿರ್ವಾಹಕ-ಜುಲೈ 09, 2022, ಸಹಾಯಕ ವ್ಯವಸ್ಥಾಪಕರು- ಜುಲೈ 23, 2022








