ಮಣಿಪುರ ಚುನಾವಣೆಗೂ ಮುನ್ನ ಐಇಡಿ ಸ್ಪೋಟ – ಇಬ್ಬರು ಐಟಿಬಿಪಿ ಪೊಲೀಸರಿಗೆ ಗಾಯ
ಐಇಡಿ ಸ್ಫೋಟಗೊಂಡು ಇಬ್ಬರು ಐಟಿಬಿಪಿ ಸಿಬ್ಬಂದಿ ಗಾಯಗೊಂಡಿರುವ ಘಟನೆ ಮಣಿಪುರದ ರಾಜಧಾನಿ ಇಂಫಾಲ್ನಿಂದ ಸುಮಾರು 45 ಕಿಮೀ ದೂರದಲ್ಲಿರುವ ಕಕ್ಷಿಂಗ್ ಜಿಲ್ಲೆಯ ವಾಂಗು ತೇರಾ ಪ್ರದೇಶದಲ್ಲಿ ನಡೆದಿದೆ. ನಂತರ ಅವರನ್ನು ಇಂಫಾಲ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರೂ ಯೋಧರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಗಾಯಗೊಂಡಿರುವ ಕಾನ್ಸ್ಟೆಬಲ್ಗಳಾದ ಗೌರವ್ ರೈ ಮತ್ತು ಗಿರಿಜಾ ಶಂಕರ್ ಇಬ್ಬರೂ ಚುನಾವಣಾ ಕರ್ತವ್ಯದಲ್ಲಿ 610 ಬೆಟಾಲಿಯನ್ ಸಿಬ್ಬಂದಿಗಳಾಗಿದ್ದು, ಇಬ್ಬರೂ ಚುನಾವಣೆಯ ದೃಷ್ಟಿಯಿಂದ ಪೊಲೀಸರೊಂದಿಗೆ ಗಸ್ತು ತಿರುಗುತ್ತಿದ್ದರು ಎಂದು ಐಟಿಬಿಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಬರಲಿದೆ.
IED blast before elections in Manipur, 2 ITBP personnel injured