ಕಾಂಗ್ರೆಸ್ ಗೆದ್ದರೇ ಅಲ್ವಾ ಸಿಎಂ ಚರ್ಚೆ ಬರೋದು : ಮಾಧುಸ್ವಾಮಿ
ಚಿತ್ರದುರ್ಗ : ಕಾಂಗ್ರೆಸ್ ನವರು ಯಾವಾಗ ಸಿಎಂ ಆಗುತ್ತಾರೆ. ಪಕ್ಷ ಮುಂದೆ ಅಧಿಕಾರಕ್ಕೆ ಬಂದರೆ ಅಲ್ವ ಸಿಎಂ ಆಗುವುದು ಎಂದು ಸಚಿವ ಮಾಧುಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಯಾವಾಗ ಸಿಎಂ ಆಗುತ್ತಾರೆ. ಪಕ್ಷ ಮುಂದೆ ಅಧಿಕಾರಕ್ಕೆ ಬಂದರೆ ಅಲ್ವ ಸಿಎಂ ಆಗುವುದು. ಸಿಎಂ ಆಗಲು ಎಲೆಕ್ಷನ್ ಆಗುವುದು ಬೇಡ್ವಾ, ಸ್ಥಾನ ಖಾಲಿಯಾಗುವುದು ಬೇಡ್ವಾ. ನಾವೆಲ್ಲ ಅದನ್ನ ಮಾತನಾಡಲು ಆಗುವುದಿಲ್ಲ, ಅವರ ಪಕ್ಷಕ್ಕೆ ಬಿಟ್ಟ ವಿಚಾರ.
ಮೊದಲು ಚುನಾಯಿತರಾಗಿ ಎಂಎಲ್ ಎಗಳು ಬಂದ ಬಳಿಕ ಸಿಎಂ ಚರ್ಚೆ ಆಗೋದು. ಕುಮಾರಸ್ವಾಮಿ ಮೈತ್ರಿ ಸರ್ಕಾರ ಬಂದು ಸಿಎಂ ಆಗುತ್ತಾರೆ ಎಂದು ಯಾರು ಅಂದು ಕೊಂಡಿದ್ದರು. ರಾಜಕಾರಣದಲ್ಲಿ ಏನೇನೂ ತಿರುವು ಪಡೆಯುತ್ತೋ. ನಮ್ಮಲ್ಲಿ ಯಾವುದೇ ಬಣಗಳು ಇಲ್ಲ ಕಾಂಗ್ರೆಸ್ ನವರು ಹುಟ್ಟು ಹಾಕುತ್ತಿರಬಹುದು ಎಂದರು.
ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್ ಭೇಟಿ ವಿಚಾರವಾಗಿ ಮಾತನಾಡಿ, ಯಾರನ್ನೂ ಯಾರು ಬೇಕಾದರೂ ಬೇಟಿಯಾಗಬಹುದು.
ಫಡ್ನವಿಸ್ ಭೇಟಿ ಮಾಡಿರುವುದು ತಪ್ಪೇನು. ನಮ್ಮ ಪಕ್ಷದ ಲೀಡರ್, ನಿಕಟವಾದ ಸ್ಥಳ ಬಾಂಬೆ ಹಾಗಾಗಿ ಹೋಗಿರುತ್ತಾರೆ. ರಮೇಶ್ ಜಾರಕಿಹೊಳಿ ಕೇಸ್ ನಿಂದ ಮುಕ್ತರಾದರೆ ಸಚಿವರಾಗುತ್ತಾರೆ. ಇದರಲ್ಲಿ ಗೊಂದಲವಿಲ್ಲ ಕೇಸ್ ಮುಕ್ತವಾದರೆ ಆಯ್ತು ಅಷ್ಟೇ ಎಂದರು.
ಶಾಲೆ- ಕಾಲೇಜು ಆರಂಭಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮೂರನೇ ಅಲೆ ಹೇಗೆ ವರ್ತಿಸುತ್ತದೆ ಎಂಬುದು ನೋಡುತ್ತಿದ್ದೇವೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿ ಆಗುತ್ತೆ ಎಂಬುದನ್ನ ಕೇಳಿದ್ದೇವೆ. ಡೆಲ್ಟಾ ವೈರಸ್ ಸಹ ಹರಡುತ್ತಿದೆ. ಹಾಗಾಗಿ ಒಂದು ತಿಂಗಳು ನೋಡಿದ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.