ಕೊರೋನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದರೆ ದಯವಿಟ್ಟು ಕೂಡಲೇ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಿ. ಈ ಮೂಲಕ ಇತರರಿಗೆ ನಿಮ್ಮಿಂದ ಸೋಂಕು ಹರಡುವುದನ್ನು ತಪ್ಪಿಸಿ ಎಂದು ಆರೋಗ್ಯ ಸಚಿವಾಲಯ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಕೊರೋನಾ ಸೋಂಕಿನ ಪರೀಕ್ಷೆಗೆ ಒಳಗಾಗಲು ಯಾರೂ ಹಿಂಜರಿಯಬಾರದು. ಕೊರೋನಾ ರೋಗ ಲಕ್ಷಣಗಳನ್ನು ಮುಚ್ಚಿಟ್ಟಷ್ಟು ಸಮಸ್ಯೆ ಮತ್ತಷ್ಟು ಹೆಚ್ಚು, ಅಲ್ಲದೆ ಎಲ್ಲರಿಗೂ ಸಮಸ್ಯೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕೊರೋನಾ ರೋಗಿಗಳ ಡಿಸ್ಚಾರ್ಜ್ ನೀತಿ ಪರಿಷ್ಕರಿಸಿರುವ ಕುರಿತು ಸ್ಪಷ್ಟನೆ ನೀಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಆಗರ್ವಾಲ್, ಹಲವು ದೇಶಗಳು ಪರೀಕ್ಷೆ ಆಧಾರಿತ ಕಾರ್ಯತಂತ್ರದಿಂದ ರೋಗಲಕ್ಷಣ ಮತ್ತು ಸಮಯಾಧಾರಿತ ಕಾರ್ಯತಂತ್ರಕ್ಕೆ ಬದಲಾಯಿಸಿಕೊಂಡಿದ್ದು, ನಾವು ಅದೇ ರೀತಿ ಬದಲಾಯಿಸಿ ಕೊಂಡಿದ್ದೇವೆ ಎಂದು ಹೇಳಿದರು.
ಧರ್ಮದ ಆಧಾರದಲ್ಲಿ ಕೊರೊನಾ ಮ್ಯಾಪಿಂಗ್ ನಡೆಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ ಗೃಹ ಸಚಿವಾಲಯ ಕೊರೊನಾ ಸೋಂಕಿಗೆ ಜನಾಂಗ, ಧರ್ಮ, ಜಾತಿ, ಪ್ರದೇಶದ ಹಂಗಿಲ್ಲ. ಮುಂಜಾಗ್ರತಾ ಕ್ರಮಗಳ ಕೊರತೆಯಿಂದಾಗಿ ಕೊರೊನಾ ಸೋಂಕು ಹರಡುತ್ತದೆ. ಧರ್ಮದ ಆಧಾರದಲ್ಲಿ ರೋಗಿಗಳನ್ನು ನೋಡಲಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು ಆರೋಪ ಎಂದು ಹೇಳಿದೆ.
ಭಾರತವು 24 ಗಂಟೆಗಳ ಅವಧಿಯಲ್ಲಿ ಗರಿಷ್ಠ 4231 ಪ್ರಕರಣಗಳನ್ನು ಕಂಡಿದ್ದು, ಒಟ್ಟು 97 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಒಂದೆಡೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೆ, ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ 20,916 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕುರುಬರ ST ಮೀಸಲಾತಿ ಜಟಾಪಟಿ: ಚೆಂಡನ್ನು ಕೇಂದ್ರದ ಅಂಗಳಕ್ಕೆ ಎಸೆದ ಸಿದ್ದರಾಮಯ್ಯ; ಬೊಮ್ಮಾಯಿ ಸರ್ಕಾರದ ಶಿಫಾರಸ್ಸೇ ಕಾರಣ ಎಂದ ಸಿಎಂ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ST) ಸೇರಿಸುವ ಸೂಕ್ಷ್ಮ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಜಾಣ್ಮೆಯ ರಾಜಕೀಯ ನಿಲುವು...