ಅಮೆಜಾನ್ ಪ್ರೈಮ್ ನಲ್ಲಿ ಜುಲೈ 21ಕ್ಕೆ ರಿಲೀಸ್ ಆಗಲಿದೆ ಕನ್ನಡದ ‘ಇಕ್ಕಟ್’

1 min read

ಅಮೆಜಾನ್ ಪ್ರೈಮ್ ನಲ್ಲಿ ಜುಲೈ 21ಕ್ಕೆ ರಿಲೀಸ್ ಆಗಲಿದೆ ಕನ್ನಡದ ‘ಇಕ್ಕಟ್’

ಭಾರತದಲ್ಲಿ ಬಹುನಿರೀಕ್ಷಿತ ಪ್ರೈಮ್‌ ದಿನಾಚರಣೆಯ ಅಂಗವಾಗಿ, ಅಮೆಜಾನ್ ಪ್ರೈಮ್ ವಿಡಿಯೋ ಇಂದು ತನ್ನ ಇತ್ತೀಚಿನ ನೇರ-ಸೇವೆಯ ಕೊಡುಗೆಯನ್ನು ಪ್ರಕಟಿಸಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನಾಗಾಭೂಷಣ ಮತ್ತು ಭೂಮಿ ಶೆಟ್ಟಿ ನಟಿಸಿರುವ ಕನ್ನಡ ಕಾಮಿಡಿ ಪ್ರೀಮಿಯರ್ ಚಲನಚಿತ್ರ “ಇಕ್ಕಟ್”  21 ನೇ ಜುಲೈ ರಂದು ರಿಲೀಸ್ ಆಗಲಿದೆ.

ಇಕ್ಕಟ್  ಹಾಸ್ಯಪ್ರಧಾನ ಸಿನಿಮಾವಾಗಿರಲಿದ್ದು, ಜನಪ್ರಿಯ ನಟರಾದ ನಾಗಭೂಷಣ ಮತ್ತು ಭೂಮಿ ಶೆಟ್ಟಿ ಸಿನಿಮಾದಲ್ಲಿ  ನಟಿಸಿದ್ದಾರೆ. ಇಶಮ್ ಮತ್ತು ಹಸೀನ್ ಖಾನ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಪವನ್ ಕುಮಾರ್ ಸ್ಟುಡಿಯೋಸ್ ಚಲನಚಿತ್ರ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ  ಇಕ್ಕಟ್   ಲಾಕ್‌ಡೌನ್‌ನ ನಡುವೆ  ಶುರುವಾದ ಒಂದು ಕಥೆಯಾಗಿದೆ.

ಇಕ್ಕಟ್‌ ಪದದ ಅರ್ಥವು ಕೂಡ ಲಾಕ್‌ ಡೌನ್‌ ನಂತೆಯೇ ‘ದಟ್ಟಣೆ’ ಅಥವಾ ‘ಬಿಗಿಯಾದ ಪರಿಸ್ಥಿತಿಯಲ್ಲಿರುವುದು’ ಎನ್ನುವುದನ್ನ ತೋರಿಸುತ್ತೆ. ಇನ್ನು ವಿಚ್ಛೇದನಕ್ಕೆ ಮುಂದಾಗಿರುವ ದಂಪತಿಗಳ ಸುತ್ತ ಈ ಕಥೆ ಸುತ್ತುತ್ತದೆ.  ಕೆಲವು ಸಾಂದರ್ಭಿಕ ಲಾಕ್‌ಡೌನ್ ಅನುಭವಗಳೊಂದಿಗೆ, ಈ ಚಿತ್ರವು ವೀಕ್ಷಕರನ್ನು ಭರಪೂರವಾಗಿ ಮನರಂಜಿಸಲು ಸಿದ್ಧವಾಗಿದೆ.

ಈ ಚಿತ್ರದಲ್ಲಿ ನಾಗಭೂಷಣ ಮತ್ತು ಭೂಮಿ ಶೆಟ್ಟಿಯವರೊಂದಿಗೆ, RJ ವಿಕಿ, ಸುಂದರ್ ವೀಣಾ, ಆನಂದ್ ನಿನಾಸಮ್ ಮತ್ತು ನವೀನ್ ಚೆಥಾನ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇಕ್ಕಟ್ ಜುಲೈ  21ಕ್ಕೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ಲೋಬಲ್ ರಿಲೀಸ್ ಆಗುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd