ಕಲಬುರಗಿ: ಕೆಇಎ ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ (RD Patil) ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ ಕಂಪೌಂಡ್ ನಿಂದ ಹಾರಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಆರ್ಡಿ ಪಾಟೀಲ್ ಓಡಿ ಹೋಗುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಆರ್ಡಿ ಪಾಟೀಲ್ಗೆ ಅಫಜಲಪುರ ಕ್ಷೇತ್ರದ ಶಾಸಕನಾಗುವ ಕನಸು ಕಂಡಿದ್ದ. 2022ರಿಂದ ಸಾಮೂಹಿಕ ಮದುವೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆತ ಆಯೋಜಿಸುತ್ತ ಬರುತ್ತಿದ್ದ. ಆದರೆ ಪಿಎಸ್ಐ ಅಕ್ರಮದಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ ತಿಂಗಳಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ನಂತರ ಸಮಾಜವಾದಿ ಪಕ್ಷ ಸೇರಿ, ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಿ 8,683 ಮತಗಳನ್ನು ಪಡೆದಿದ್ದ.
ಈತ ಹಣ ಕೊಟ್ಟರೆ ಯಾವುದೇ ಪರೀಕ್ಷೆ ಪಾಸ್ ಮಾಡಿಸುತ್ತಿದ್ದ ಎನ್ನಲಾಗುತ್ತಿದೆ. 016 ರಿಂದ ಇಲ್ಲಿವರಗೆ ಬಹುತೇಕ ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದ. ನೂರಾರು ಜನರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಕೊಡಿಸಿದ್ದಾನೆ ಎಂಬ ಆರೋಪ ಈ ವ್ಯಕ್ತಿಯ ಮೇಲಿದೆ.
ಎಸ್ಡಿಎನಿಂದ ಹಿಡಿದು ಪಿಎಸ್ಐ, ಇಂಜನೀಯರ್ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ಮಾಡುತ್ತಿದ್ದ. 5 ರಿಂದ 50 ಲಕ್ಷ ವರೆಗೆ ಡೀಲ್ ಮಾಡಿಕೊಂಡು ಅಕ್ರಮ ವೆಸಗಿದ್ದಾನೆ ಎಂಬ ಆರೋಪ ಈತನ ಮೇಲಿದೆ.
ಪೊಲೀಸರು ಮನೆಗೆ ಬರುತ್ತಿರುವ ಮಾಹಿತಿ ತಿಳಿದು ಅಪಾರ್ಟ್ಮೆಂಟ್ ಕಾಂಪೌಂಡ್ ಹಾರಿ ಪರಾರಿಯಾಗಿರುವ ರುದ್ರಗೌಡ ಪಾಟೀಲ್ ಪರಾರಿ ಆಗಿದ್ದಾನೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.