ಪುರಾತನ ವಸ್ತುಗಳ ಅಕ್ರಮ ಮಾರಾಟ : ಐವರು ವಶಕ್ಕೆ
ಬೆಂಗಳೂರು : ಆಂಬರ್ ಗ್ರಿಸ್ ಸೇರಿದಂತೆ ಪುರಾತನ ವಸ್ತುಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಜೀಬ್ ಪಾಶಾ (48), ಮಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40), ಸಂತೋಷ್ (31), ಜಗನ್ನಾಥಾಚಾರ್ (52) ಬಂಧಿತ ಆರೋಪಿಗಳಾಗಿದ್ದಾರೆ.
ಸಿಸಿಬಿ ಪೊಲೀಸರು ಬರೋಬ್ಬರಿ 80 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಗಲಗುಂಟೆ ಬಳಿಯ ಕಟ್ಟಡವೊಂದರಲ್ಲಿ ಪುರಾತನ ವಸ್ತುಗಳನ್ನು ಸಂಗ್ರಹಿಸಲಾಗಿತ್ತು.
ಇದರ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತರ ಬಳಿ 80 ಕೆ.ಜಿ ಆಯಂಬರ್ ಗ್ರಿಸ್, ಬ್ರಿಟಿಷ್ ಈಸ್ಟ್ ಇಂಡಿಯಾ ಕಾಲದ ರೆಡ್ ಮಕ್ರ್ಯೂರಿ ಬಾಟಲ್, ಸ್ಟೀಮ್ ಫ್ಯಾನ್ ಜಫ್ತಿ ಮಾಡಲಾಗಿದೆ.









